ರಾಷ್ಟ್ರೀಯ ಪಶು ರೋಗ, ಸೋಂಕು ಶಾಸ್ತ್ರ ಮತ್ತು ಪಶು ಮಾಹಿತಿ ವಿಜ್ಞಾನ ಸಂಸ್ಥೆ ( ನಿವೇಧಿ-ಐಸಿಆರ್) ವತಿಯಿಂದ ನಡೆದ ಮಹಿಳಾ ದಿನಾಚರಣೆ ಗಮನಸೆಳೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಯಲಹಂಕದಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆ ನಿವೇದಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೀರ ಉದಯ್ ಕುಮಾರ್, ಇನ್ಫೋಸಿಸ್ ಡೈರೆಕ್ಟರ್ ಮತ್ತು ಸುಶೀಲಾ ಸಂತೋಷ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರಗತಿಪರ ರೈತ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು.
ಸಾಧನೆ ಉತ್ತುಂಗದಲ್ಲಿ ಇರುವ ಮಹಿಳೆಯರಿಗೆ ಕವಿತ ಮಿಶ್ರ, ಪ್ರಗತಿ ಪರ ವಿಧ್ಯಾವಂತ ರೈತ ಮಹಿಳೆಯಾಗಿದ್ದು, ರಾಯಚೂರು ಮೂಲದ ಇವರು ಬಿ.ಇ ಪದವಿದರೆ ಆಗಿದ್ದು ಭೂಮಿ ತಾಯಿಯೆ ಮಲ್ಟಿ ನ್ಯಾಷನಲ್ ಕಂಪನಿ ಎಂದು ಸಾಭಿತು ಮಾಡಿದ ದಿಟ್ಟ ಮಹಿಳೆ ಎಂದು ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜೇಶ್ವರಿ ಶೋಮ್ ಅಭಿಪ್ರಾಯ ಪಟ್ಟಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮೀಣ ಭಾಗದ ಸುಮಾರು ನೂರು ಮಹಿಳೆಯರಿಗೆ ಸನ್ಮಾನ ಮಾಡಲಾಯಿತು.
ಸದ್ಯದಲ್ಲಿ 48% ರೈತ ಮಹಿಳೆಯರು ಇದ್ದು ಕೇವಲ 13% ಮಹಿಳೆಯರು ಮಾತ್ರ ಸ್ವಂತ ಕೃಷಿ ಭೂಮಿ ಹೊಂದಿದ್ದಾರೆ ಎಂದರು. ಮಹಿಳೆಯರೆ ತಯಾರು ಮಾಡಿದ ಉತ್ಪನ್ನಗಳ ಮಾರಾಟ ಸಹ ಮಾಡಿದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು.