ಬೆಂಗಳೂರು: ಇಂದು ಮಾರ್ಚ್ 8. ಇಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ಬದುಕಿನ 8ನೇ ಬಜೆಟ್ ಮಂಡಿಸಿ ದೇಶದ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಮಹಿಳಾ ದಿನದಂದು ವನಿತೆಯರ ಪರ ಬಜೆಟ್ ಮಂಡಿಸಿ ಶಹಬ್ಬಾಶಗಿರಿ ಗಿಟ್ಟಿಸಿಕೊಂಡಿದ್ದಾರೆ.
ಬಿಎಸ್‌ವೈ ಅವರು ಬೆಂಗಳೂರಿಗಾಗಿ ಪ್ರಕಟಿಸಿದ ಕೊಡುಗೆ ಹೀಗಿವೆ:
- ಬೆಂಗಳೂರು ನಗರ ಅಭಿವೃದ್ಧಿಗೆ 7,795 ಕೋಟಿ ಅನುದಾನ.
- ಬೆಂಗಳೂರಿನ ಮೆಟ್ರೋ ಯೋಜನೆಗಳ ಕಾಮಗಾರಿಗಳಿಗೆ 30,000 ಕೋಟಿ ಅನುದಾನ
- ಬೆಂಗಳೂರು ಉಪನಗರ ರೈಲು ಅಭಿವೃದ್ಧಿಗೆ 15,767 ಕೋಟಿ ರೂ.
- ಬೆಂಗಳೂರಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ 14,788 ಕೋಟಿ ರೂ.
- ಕೆ.ಸಿ.ಜನರಲ್ ಆಸ್ಪತ್ರೆ ಅಭಿವೃದ್ಧಿಗೆ 20 ಕೋಟಿ ರೂ.
- ಬಿಬಿಎಂಪಿಯ 57 ವಾರ್ಡ್ ಗಳಲ್ಲಿ ಜನಾರೋಗ್ಯ ಕೇಂದ್ರ ಸ್ಥಾಪನೆ.
- ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಗೆ 9,000 ಕೋಟಿ ರೂ ಅನುದಾನ
- ವಿಕ್ಟೋರಿಯಾ, ಜಯದೇವ ಆಸ್ಪತ್ರೆಯಲ್ಲಿ ಅಂಗಾಗ ಕಸಿ ಚಿಕಿತ್ಸೆಗಾಗಿ 28 ಕೋಟಿ ರೂ ಅನುದಾನ
- ಬಿಬಿಎಂಪಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 33 ಕೋಟಿ
- ಬೆಂಗಳೂರಿನ ಹೆಸರಘಟ್ಟದಲ್ಲಿ ಕುರಿ ಮೇಕೆ ತಳಿಗಳ ತರಬೇತಿಗೆ ಥೀಮ್‌ಪಾರ್ಕ್ 100 ಎಕರೆ ಪ್ರದೇಶದಲ್ಲಿ ನಿರ್ಮಾಣ
- ಆಶ್ರಯಸೌಲಭ್ಯಕ್ಕೆ ಒತ್ತು. 35 ಲಕ್ಷ ಗಳಿಂದ 45 ಲಕ್ಷ ರೂ. ವರೆಗಿನ ಮೌಲ್ಯದ ಅಪಾರ್ಟ್ ಮೆಂಟ್ ಸೌಲಭ್ಯಕ್ಕೆ ಕ್ರಮ