ನವದೆಹಲಿ: ಸಂಸತ್ ಕಲಾಪ ಕೋಲಾಹಲಕ್ಕೆ ಇಂದು ಮತ್ತೆ 49 ಸಂಸದರು ಅಮಾನತುಗೊಂಡಿದ್ದಾರೆ. ಸೋಮವಾರ ಒಂದೇ ದಿನ ವಿರೋಧ ಪಕ್ಷಗಳ 79 ಸಂಸದರು ಕಲಾಪದಿಂದ ಅಮಾನತು ಗೊಂಡಿದ್ದು, ಅದರ ಬೆನ್ನಲ್ಲೇ ಮಂಗಳವಾರ ಮತ್ತೆ 49 ಮಂದಿಯನ್ನು ಸ್ಪೀಕರ್ ಅಮಾನತುಗೊಳಿಸಿದ್ದು, ಈ ಮೂಲಕ ಸಂಸತ್ ಇತಿಹಾಸದಲ್ಲಿ ದಾಖಲೆ ಎಂಬಂತೆ, ಈ ಅಧಿವೇಶನದಲ್ಲಿ ಈವರೆಗ ಅಮಾನತುಗೊಂಡ ಸಂಸದರ ಒಟ್ಟು ಸಂಖ್ಯೆ 141ಕ್ಕೇರಿದೆ.
ಸಂಸತ್ತಿನ ಭದ್ರತಾ ಲೋಪ ಘಟನೆಯನ್ನು ಮುಂದಿಟ್ಟು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಂಗಳವಾರ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಕಾರ್ತಿ ಚಿದಂಬರಂ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ಎನ್‌ಸಿಪಿಯ ಸುಪ್ರಿಯಾ ಸುಳೆ ಸೇರಿದಂತೆ ಪ್ರತಿಪಕ್ಷಗಳ ಸಂಸದರನ್ನು ಲೋಕಸಭಾ ಸ್ಪೀಕರ್ ಅಮಾನತು ಮಾಡಿದ್ದಾರೆ.





































































