ನಾಗಮಂಗಲ ತಾಲೂಕು ತುಪ್ಪದಮಡ ಗ್ರಾಮಪಂಚಾಯತಿಯಲ್ಲಿ ಜೆಡಿಎಸ್ ನ ಹಲವು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಬೆಟ್ಟೇಗೌಡ, ಸೂರಿ, ರವಿ, ಪ್ರತಾಪ್ ಮತ್ತು ಸಂಗಡಿಗರು, ಪ್ರದೀಪ್, ಉಮೇಶ್, ಸೋಮಣ್ಣ, ದೊಡ್ಡನಗೌಡರು, ಚಿಕ್ಕಣ್ಣ, ಜಯರಾಮ್, ನಾಗರಾಜ್, ಶಿಕಾರಿಪುರ ಗ್ರಾಮದ ಮುಖಂಡರು ಸೇರಿದಂತೆ ಹಲವು ಜೆಡಿಎಸ್ ಕಾರ್ಯಕರ್ತರಿಗೆ ಸಚಿವ ಚಲುವರಾಯಸ್ವಾಮಿ, ಅಭ್ಯರ್ಥಿ ವೆಂಕಟರಮಣೇಗೌಡ ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರಸನ್ನ, ಕೃಷ್ಣಪ್ಪ, ಲಕ್ಷ್ಮಿಕಾಂತ್, ಹೆಚ್.ಡಿ.ಪ್ರಸನ್ನ, ರಮೇಶ್, ಸಾವಿತ್ರಮ್ಮ, ದೇವರಾಜ್, ಕುಮಾರ್, ಪುಟ್ಟಸ್ವಾಮಿ, ನಾಗರಾಜ್, ಗೋವಿಂದ್ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.






















































