ದಾವಣಗೆರೆ: ರೌಡಿಶೀಟರ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರು ಶರಣಾಗಿದ್ದಾರೆ.
ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್ ಕುಮಾರ್ನನ್ನು ಆರೋಪಿಗಳು ಹತ್ಯೆಗೈದಿದ್ದರು. ಮೃತ ಸಂತೋಷ್ ಕುಮಾರ್ ಪತ್ನಿ ಶ್ರುತಿ ದೂರಿನ ಮೇರೆಗೆ 12 ಜನರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ನಡುವೆ ಆರೋಪಿಗಳಾದ ಕಾರ್ತಿಕ್, ಚವಳಿ ಸಂತು, ನವೀನ್, ಗುಂಡಪ್ಪ, ಬಸವರಾಜ್, ಹನುಮಂತಪ್ಪ, ಗಿಡ್ಡ ವಿಜಿ, ಶಿವು, ಕಡ್ಡಿ ರಾಘು, ಪ್ರಶಾಂತ್ ಮತ್ತು ಗಣಿ ಸೇರಿದಂತೆ ಎಂಬವರು ಪೊಲೀಸರ ಎದುರು ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






































































