ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಮತಾಂಧರು ಟೈಲರ್ ಕನ್ಹಯ್ಯ ಲಾಲ್ ಅವರನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಿರುವುದು ಖಂಡನೀಯ. ಇದು ಅತ್ಯಂತ ಅಮಾನುಷ ಘಟನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾರು ಇದಕ್ಕೆ ಸಂಘಟನೆ ಹಾಗೂ ಇಬ್ಬರು ಯುವಕರು ಇದ್ದಾರೆ. ಕತ್ತಿ ಝಳಪಿಸಿದ ವಿಡಿಯೋ ವೈರಲ್ ಆಗಿದೆ. ಇವರೆಲ್ಲ ಸಮಾಜಕ್ಕೆ ತೊಂದರೆ ಕೊಡುವ ವ್ಯಕ್ತಿಗಳು ಎಂದರು.
ಆರೋಪಿಗಳನ್ನು ಬಂಧಿಸಲಾಗಿದೆಂದು ಆ ರಾಜ್ಯದ ಸರ್ಕಾರ ಹೇಳಿದೆ. ಬಂಧಿಸುವುದರ ಜತೆಗೆ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಜರುಗಿಸಬೇಕು. ಅವರಿಗೆ ತಕ್ಕ ಶಾಸ್ತಿ ಆಗಲೇಬೇಕು. ಇಂತಹ ಸಂಘಟನೆ, ವ್ಯಕ್ತಿಗಳ ದಮನ ಆಗಲೇಬೇಕು ಎಂದು ಅವರು ಆಗ್ರಹಿಸಿದರು.
ನಾವು ಸರ್ಕಾರದಲ್ಲಿ ಇದ್ದಾಗ ಇಂಥ ಘಟನೆ ಆಗುವುದಕ್ಕೂ ಮುನ್ನ ಗಮನಿಸಿಬೇಕಾಗುತ್ತದೆ. ಇದು ದೇಶದಲ್ಲಿ ಹೀಗೆ ಮುಂದುವರೆದರೆ ಕಷ್ಟ. ಇಡೀ ಸರ್ಕಾರಗಳಿಗೆ ಹೇಳೋದು ಅಧಿಕಾರಿಗಳಿಗೆ ಸೂಚನೆ ಕೊಡಿ, ರಸ್ತೆಯಲ್ಲಿ ಹೋಗುವ ಸೈಕಲ್, ಮರಳ ಗಾಡಿ ಹಿಡಿಯುವುದಲ್ಲ. ನಿತ್ಯ ಇಂಥವರ ಬಗ್ಗೆ ವಾಚ್ ಮಾಡಬೇಕು. ಇಂತಹ ಘಟನೆ ನಡೆಯದಂತೆ ಮುನ್ನೆಚ್ವರಿಕೆ ವಹಿಸಬೇಕು. ಅವರ ಜೀವದ ಹಂಗು ತೊರೆದು ಇಂಥ ಕೆಲಸ ಮಾಡ್ತಾ ಇದ್ದಾರೆ ಅಂದರೆ ಪ್ರಚೋದನೆ ಎಷ್ಟಿರಬೇಕು. ಹಾಗಾಗಿ ಮೊದಲು ಪ್ರಚೋದನೆ ಕೊಡುವ ಸಂಘಟನೆಗಳನ್ನು ಹಿಡಿಯಿರಿ ಎಂದು ಒತ್ತಾಯಿಸಿದರು.






































































