ಮೈಸೂರು,ಅ 2: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ದಸರಾ ಏರ್ ಶೋ ಕೂಡ ಒಂದು..ದೇಶ ವಿದೇಶಿಗರ ಗಮನ ಸೆಳೆದಿರುವ ಈ ಏರ್ ಶೋವನ್ನು ಮೈಸೂರಿನ ಬನ್ನಿಮಂಟಪದಲ್ಲಿ ಆಯೋಜಿಸಲಾಗಿತ್ತು. ಆದರೆ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಏರ್ ಶೋನಲ್ಲಿ ಭಾಗವಹಿಸಬೇಕಿದ್ದ ಹೆಲಿಕಾಪ್ಟರ್ ಸದ್ಯ ತುರ್ತು ಭೂಸ್ಪರ್ಶವಾಗಿರುವ ಘಟನೆ ನಡೆದಿದೆ.
ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೆಲಿಕಾಪ್ಟರ್ ಹೊರಟಿತ್ತು. ಈ ವೇಳೆ ಹೆಲಿಕಾಪ್ಟರ್ ನಲ್ಲಿ ಹೈಡ್ರಾಲಿಕ್ ವ್ಯವಸ್ಥೆ ಕೈಕೊಟ್ಟಿದ್ದರಿಂದ ಶ್ರೀರಂಗಪಟ್ಟಣದ ಸಮೀಪ ಅರಕೆರೆ ಬೋರೆ ಬಳಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ತಾಂತ್ರಿಕ ದೋಷ ಹಿನ್ನೆಲೆ ಸೇನಾ ಹೆಲಿಕಾಪ್ಟರ್ ತುರ್ತು ಲ್ಯಾಂಡ್ ಆಗಿದೆ.
ತುರ್ತು ಭೂಸ್ಪರ್ಶದ ಬಳಿಕ ಏರ್ ಫೋರ್ಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ವೇಳೆ ಅದೃಷ್ಟವಶಾತ್ ಹೆಲಿಕಾಪ್ಟರ್ ನಲ್ಲಿದ್ದ ಸೇನಾ ಸಿಬ್ಬಂದಿ ಪಾರಾಗಿದ್ದಾರೆ. ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.