ಬೆಂಗಳೂರು : ನಿರುಪಯುಕ್ತ ವಾಹನಗಳ ಬಿಡಿಭಾಗಗಳು ಕನ್ನಡ ಅಕ್ಷರಗಳಾಗಿ ಬಾಗಿವೆ, ಹಗಲಲ್ಲಿ ಲೋಹದ ಅಕ್ಷರಗಳಾಗಿ ಕಾಣುವ ಅಕ್ಷರಗಳು ರಾತ್ರಿ ವೇಳೆ ದೀಪಾಲಂಕಾರದಿಂದ ದಾರಿಹೋಕರ ಕಣ್ಮನ ಸೆಳೆಯುತ್ತಿವೆ.
ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್ ಇಎಸ್ ಸರ್ಕಲ್ ನ ಪುಟ್ ಪಾತ್ ನಲ್ಲಿ ಕನ್ನಡ ಅಕ್ಷರಮಾಲೆ ಮತ್ತು ಸಂಖ್ಯೆಗಳು ಜನರ ಆಕರ್ಷಣೆ ಕೇಂದ್ರವಾಗಿದೆ, 66 ನೇ ಕನ್ನಡ ರಾಜ್ಯೋತ್ಸವವನ್ನ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲಾಗಿತ್ತು, ಪುಟ್ ಬಾತ್ ನಲ್ಲಿ ನಿರ್ಮಾಣ ಮಾಡಲಾಗಿರುವ ಲೋಹದ ಕನ್ನಡ ಅಕ್ಷರಮಾಲೆಗಳನ್ನ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಉದ್ಘಾಟನೆ ಮಾಡಿದರು,
ಬಿಬಿಎಂಪಿ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ, ಇದಕ್ಕಾಗಿ ಸುಮಾರು 70 ಲಕ್ಷ ಹಣ ಖರ್ಚು ಮಾಡಲಾಗಿದೆ. ವಿಶೇಷ ವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನ ಬಳಸಿಕೊಂಡು ಅಕ್ಷರಗಳನ್ನ ರಚಿಸಲಾಗಿದೆ.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಮುನಿರಾಜು, ಸತೀಶ್, ಚಂದ್ರೇಗೌಡ, ಬಿಬಿಎಂಪಿ ಜಂಟಿ ಆಯುಕ್ತ ಡಾ.ಅಶೋಕ್, ಎಇ ಸಚಿನ್, ನಂದೀಶ್ ಸೇರಿ ಹಲವರು ಭಾಗಿಯಾಗಿದ್ದರು.