ಬೆಂಗಳೂರು: ದೊಡ್ಡಜಾಲ ಗ್ರಾಮಪಂಚಾಯ್ತಿಯ 2021-2022 ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಮಾಜಿ ಸಚಿವ ಕೃಷ್ಣಾ ಬೈರೇಗೌಡ ಭಾಗವಹಿಸಿದರು.
ಹಲವು ಪ್ರಮುಖ ಕಾರ್ಯಕ್ರಮಗಳಿಗೆ ಈ ಗ್ರಾ.ಪಂ ಸಭೆ ಸಾಕ್ಷಿಯಾಯಿತು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಕೃಷ್ಣಬೈರೇಗೌಡ ಪ್ರಯಾಣಿಕರ ತಂಗುದಾಣ ಮತ್ತು ನೀರಿನ ಓವರ್ ಟ್ಯಾಂಕ್ ಉದ್ಘಾಟಿಸಿ ಸಭೆಗೆ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಡಿಜಿಟಲ್ ಈ ಸ್ವತ್ತು ಪತ್ರಗಳನ್ನು ಗ್ರಾಮಸ್ಥರಿಗೆ ವಿತರಿಸಿದರು. ಆಶಾ ಕಾರ್ಯಕರ್ತರಿಗೆ ಮತ್ತು ಪಂಚಾಯ್ತಿಯ ಸ್ವಚ್ಚತಾ ಕಾರ್ಮಿಕರಿಗೆ ದಿನಸಿಕಿಟ್ ವಿತರಿಸಿದರು. ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರಾದ ಶ್ರೀನಿವಾಸ್ 25 ವರ್ಷ ಕಾರ್ಯನಿರ್ವಹಣೆ ಮಾಡಿ ಯಾವುದೇ ಆರೋಪ ಇಲ್ಲದೆ ಕೆಲಸ ಮಾಡಿದದ್ದಕ್ಕೆ ಸನ್ಮಾನ ಮಾಡಲಾಯಿತು.
ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣಾ ಬೈರೇಗೌಡ ಗ್ರಾಮ ಪಂಚಾಯತಿಗಳು ದೇಶದ ಆಸ್ತಿ ನಿಜವಾದ ಸೇವೆ, ದೇಶದ ಬೆಳವಣಿಗೆ ಬುನಾದಿ ಹಾಕಲು ಸದವಕಾಶವನ್ನು ಕಲ್ಪಿಸಿಕೊಟ್ಟ ಕೆಲಸ. ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನ ಕಟ್ಟ ಕಡೆಯ ಸಾಮಾನ್ಯನಿಗೆ ತಲುಪಿಸುವುದು ಒಬ್ಬ ಗ್ರಾಮ ಪಂಚಾಯತಿ ಸದಸ್ಯ, ನಾವೆಲ್ಲಾ ಶಾಕಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೊಗ್ತೇವೆ, ಇನ್ನೂ ಕೆಲವರು ವರ್ಷಗಳು ಕಳೆದರೂ ನಮ್ಮ ಶಾಸಕರು ಯಾರು ಅಂತ್ಲೆ ಗೊತ್ತಾಗೋಲ್ಲ. ಆದ್ರೆ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಏಳಿಗೆ, ಸರ್ವತೋಮುಖ ಪ್ರಗತಿ ಸಾಧಿಸಲು ನಿಜವಾದ ವೇದಿಕೆ ಇದನ್ನ ಸದ್ಬಳಕೆ ಮಾಡಿಕೊಂಡು ಜನರ ಸೇವೆ ಮಾಡುವಂತೆ ಮನವಿ ಮಾಡಿದರು.
ಅದಕ್ಕಾಗೆ ಗ್ರಾಮ ಪಂಚಾಯತಿ ಚುನಾವಣೆ ಯಲ್ಲಿ ಪಕ್ಷದ ಚಿಹ್ನೆ ಇಲ್ದೆ ಗೆದ್ದು ಬರಬಹುದಾದ ಅವಕಾಶ ಮಾಡಿಕೊಡುವ ಪ್ರಯತ್ನ ಕಾಂಗ್ರೆಸ್ ಸರ್ಕಾರದ್ದಾಗಿದೆ. ಆದರೆ ಇದೀಗ ಅದೇ ಪ್ರತಿಷ್ಠೆಯಾಗ್ತಿದೆ. ಗೆಲ್ಲೋ ವರೆಗೆ ಮಾತ್ರ ಪಕ್ಷ ಗೆದ್ದ ಮೇಲೆ ಸಮಗ್ರ ಅಭಿವೃದ್ಧಿಯೆ ಪಕ್ಷ ಆಗಬೇಕು, ಗ್ರಾಮದಲ್ಲಿ ಸರಕಾರಿ ಸವಲತ್ತುಗಳು ನಿಜವಾದ ಪಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಸದಸ್ಯರದ್ದು ಆಗಿರುತ್ತದೆ ಎಂದುಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಸೇರಿದಂತೆ ತಾಲ್ಲೂಕು ಪಂಚಾಯತಿ ಅಧಿಕಾರಿಗಳು, ತಾಲ್ಲೂಕು-ಜಿಲ್ಲಾ ಪಂಚಾಯತಿ ಸದಸ್ಯರು ಪಾಲ್ಗೊಂಡಿದ್ದರು.