(ವರದಿ: ನವೀನ್ ಕುಮಾರ್)
ಮಧ್ಯ ಪ್ರಿಯರಿಗೆ ಸೋಪಾನಾ
ಯಲಹಂಕ ಸುತ್ತಮುತ್ತ ಮಧ್ಯರಾತ್ರಿಯಾದ್ರೂ ಸಿಗುತ್ತೆ ಮದ್ಯ.. ಲಾಕ್‌ಡೌನ್ ಕಾಲದಲ್ಲೂ ಸಿಗ್ತಿತ್ತು ಮಧ್ಯ.. ನೈಟ್ ಕಫ್ರ್ಯೂಗೂ ಡೋಂಟ್ ಕೇರ್.
ಯಲಹಂಕ: ಸರ್ಕಾರ ಕೊರೋನ ನಿಯಂತ್ರಣಕ್ಕೆ ಏನೆಲ್ಲಾ ನಿಯಮಗಳೂ ಮಾಡಿದ್ರೂ ಜನರು ಮಾತ್ರ ಯಾವ್ದಕ್ಕೂ ಕೇರ್ ಮಾಡ್ತಾ ಇಲ್ಲ. ಇದರ ಜೊತೆಗೆ ಡಾಬ, ಕ್ಲಬ್, ಪಬ್ ಗಳಲ್ಲಿ ಜನರಿಗೆ ಅವಕಾಶ ಹೆಚ್ಚಿಸಿದ್ರೆ ಕೊರೋನ ಹರಡುವ ಭೀತಿ ಇದ್ದಿದ್ರಿಂದ ಪಬ್, ಕ್ಲಬ್ ಗಳಲ್ಲಿ ಅವಕಾಶ ಕಮ್ಮಿ ಮಾಡಿದ್ರೂ ಜನರು ಮಾತ್ರ ಬುದ್ದಿ ಕಲೀತಾ ಇಲ್ಲ.
ಫ್ಯಾಮಿಲಿ ಡಾಬಾ ಹೆಸರಲ್ಲಿ ಯಲಹಂಕ ಸುತ್ತಮುತ್ತಲ ಪ್ರದೇಶಗಳಲ್ಲಿ ಡಾಬಾ ಗಳಲ್ಲಿ ಮಧ್ಯರಾತ್ರಿವರೆಗೂ ಎಣ್ಣೆ, ಮಾಂಸ ಮಾರಾಟ ನಡೆಯುತ್ತಿದ್ದು, ಲಾಕ್ ಡೌನ್ ಸಮಯದಲ್ಲೂ ಬಹುತೇಕ ಡಾಬಾಗಳಲ್ಲಿ ಮಧ್ಯಮಾರಾಟ ನಡೆಯುತ್ತಿದ್ರೂ ಪೋಲೀಸ್ರು ಮಾತ್ರ ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶನ ಮಾಡ್ತಿದ್ದಾರೊ ಎಂದು ಜನ ಪ್ರಶ್ನಿಸಿದ್ದಾರೆ.
ಬಹುತೇಕ ಡಾಬಾಗಳಲ್ಲಿ ಮಧ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಿದ್ದು ಜನ ಸಮಾನ್ಯರಿಗೆ ಊಟದ ಜೊತೆ ಮತ್ತೇರಿಸೊ ಮದ್ಯ, ಸಿಗರೇಟ್ ಸೇರಿದಂಥೆ ನಶೆಯ ವಸ್ತುಗಳು ಸುಲಭವಾಗಿ ದೊರೆಯುತ್ತಿದ್ದು, ಫ್ಯಾಮಿಲಿ ರೆಸ್ಟೋರೆಂಟ್ ಹೆಸರಲ್ಲಿ ನಡೆಯುತ್ತಿರುವ ಡಾಬಾ ಹೆಸರಿನ ನಡೆಯುತ್ತಿರುವ ಅಕ್ರಮಗಳು ಅಧಿಕಾರಿಗಳಿಗೆ ತಿಳಿಯದೆ ಏನಿಲ್ಲ. ಆದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಅನೇಕಾನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಕ್ಕೂರು ಮುಖ್ಯರಸ್ತೆ, ನ್ಯಾಯಾಂಗ ಬಡಾವಣೆ ತಿರುವಿನ ರಸ್ತೆಗಳು, ಅಳ್ಳಾಳಸಂದ್ರ ಗೇಟ್, ಯಲಹಂಕ – ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಗಾಲಿ ಮತ್ತು ಅಚ್ಚು ಕಾರ್ಖಾನೆ, ಪುಟ್ಟೇನಹಳ್ಳಿ ಮುಖ್ಯ ರಸ್ತೆ ಸೇರಿದಂತೆ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಏರ್ಪೋರ್ಟ್ ರಸ್ತೆಗಳಲ್ಲಿ, ರಸ್ತೆಬದಿಗಳಲ್ಲಿ ನಿಲ್ಲಿಸುವ ವಾಹನಗಳು, ಅಡ್ಡಾದಿಡ್ಡಿ ವಾಹನ ಚಾಲನೆಯಿಂದ ಅಪಘಾತಗಳು ಹೆಚ್ಚಾಗಿದ್ದು ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡುತ್ತಿವೆ.
ರಾತ್ರಿ 12-1 ಗಂಟೆ ಆದ್ರೂ ಮಧ್ಯ ಮಾರಾಟ ನಡೆಯುತ್ತಿದೆ. ರಸ್ತೆ ಬದಿ ವಾಹನಗಳು ನಿಲ್ಲಿಸೋದ್ರ ಜೊತೆಗೆ ಮಧ್ಯ ಪಾನಮತ್ತರು ರಸ್ತೆಗಳಲ್ಲಿ ಅಸಭ್ಯವರ್ತನೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಕುಟುಂಬ ಸಮೇತ ಫ್ಯಾಮಿಲಿ ರೆಸ್ಟೋರೆಂಟ್‌ಗಳತ್ತ ಬರುವ ಮಹಿಳೆಯರು, ಮಕ್ಕಳಿಗೆ ಕಸಿವಿಸಿ ಮೂಡಿಸುವಂತಹಾ ಘಟನೆಗಳು ಹೆಚ್ಚುತ್ತಲಿವೆ.
ಪರಿಸ್ಥಿತಿ ಹೀಗಿದ್ದರೂ ಯಲಹಂಕ ಪೊಲೀಸರು ಮಾತ್ರ ಡಾಬಾ, ಫ್ಯಾಮಿಲಿ ರೆಸ್ಟೋರೆಂಟ್ ಸುತ್ತಮುತ್ತ ಕಾಟಾಚಾರಕ್ಕೆ ಬೀಟ್ ಹಾಕ್ತಾ, ಒಂದಷ್ಟು ಮಂದಿಗೆ ಅವಾಜ್ ಹಾಕ್ತಾ ಇದ್ದಾರೆ. ಆದರೆ ನಿಯಮಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿಲ್ಲವೇಕೆ ಎಂಬುದು ಸಾರ್ವಜನಿಕರ ಪ್ರಶ್ನೆ.