ಉಡುಪಿ : ಬಡಗುತಿಟ್ಟು ಯಕ್ಷರಂಗದ ಹಿರಿಯ ಭಾಗವತ ಕಲಾವಿದ ಮತ್ಯಾಡಿ ನರಸಿಂಹ ಶೆಟ್ಟಿ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಬಡಗುತಿಟ್ಟಿನ ಮೇರು ಭಾಗವತರ ಪರಂಪರೆ ಕೊಂಡಿಯೊಂದು ಕಳಚಿದೆ.
ತಮ್ಮ ಶ್ರೀಮಂತ ಕಂಠದಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಪ್ರಸಿದ್ಧರಾದವರು ಮತ್ಯಾಡಿ ನರಸಿಂಹ ಶೆಟ್ಟಿ ಭಾಗವತರು. ಮಂದಾರ್ತಿ ಮತ್ತು ಕಳವಾಡಿ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ ಹೆಗ್ಗಳಿಕೆ ಇವರದ್ದು.
ಮತ್ಯಾಡಿ ನರಸಿಂಹ ಶೆಟ್ಟಿ ಭಾಗವತರ ನಿಧನಕ್ಕೆ ಯಕ್ಷಾಭಿಮಾನಿಗಳು ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಇವರು ಒರ್ವ ಪುತ್ರ, ಮೂವರು ಪುತ್ರಿ ಮತ್ತು ಐವರು ಮೊಮ್ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.