ಬೆಂಗಳೂರು: ಕರುನಾಡಿನ ಬಾಲ ಕವಯಿತ್ರಿ ಅಮನ ಜೆ.ಕುಮಾರ್, ಹೊಸದಾಗಿ ಎರಡು ಅಂತರರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿದ್ದಾಳೆ. “ಅಂತರರಾಷ್ಟ್ರೀಯ ವಿಶ್ವ ದಾಖಲೆ”ಯಲ್ಲಿ “ಅತ್ಯಂತ ಕಿರಿಯ ಕವಯಿತ್ರಿ” ಹಾಗೂ “ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್”ನಲ್ಲಿ “ಕಿರಿಯ ಲೇಖಕಿ” ಎಂದು 14 ವರ್ಷ, 6 ತಿಂಗಳು ಹಾಗೂ 6 ದಿನ ವಯಸ್ಸಿನಲ್ಲಿ ಮೂರು ಪುಸ್ತಕಗಳನ್ನು ಮೂರು ಸತತ ವರ್ಷಗಳಲ್ಲಿ ಎರಡು ವಿವಿಧ ಭಾಷೆಗಳಲ್ಲಿ ಬರೆದಿರುವ ಕಿರಿಯ ಕವಯಿತ್ರಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಮತ್ತು ಜೈವಂತ್ ಕುಮಾರ್ ಪುತ್ರಿ ‘ಅಮನ ಜೆ.ಕುಮಾರ್’, ಬಾಲ್ಯದಲ್ಲೇ ಸಾರಸ್ವತ ಲೋಕದಲ್ಲಿ ಗಮನಸೆಳೆದಿದ್ದಾರೆ. ‘ಅಮನ’ ರಚಿಸಿರುವ ವಿವಿಧ ಕೃತಿಗಳು ಜನಪ್ರಿಯವಾಗಿದ್ದು, ಇದೀಗ ಈ ಸಾಧನೆಯ ಜೊತೆ ಮತ್ತಷ್ಟು ಪ್ರಶಸ್ತಿಗಳು ಈ ಸಾಧನೆಯ ಕಿರೀಟಕ್ಕೆ ಗರಿ ಇಟ್ಟಂತಿದೆ.
ಅಮನ ಪ್ರಸ್ತುತ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಈಗಾಗಲೇ ಐದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾಳೆ. ಈಕೆಯು ಆಂಗ್ಲ ಭಾಷೆಯಲ್ಲಿ ಎರಡು ಪುಸ್ತಕಗಳನ್ನು ಹಾಗೂ ಒಂದನ್ನು ಹಿಂದಿಯಲ್ಲಿ ಬರೆದಿದ್ದು, ಇವಳ ನಾಲ್ಕನೇ ಪುಸ್ತಕ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಲು ಸಿದ್ದವಾಗುತ್ತಿದೆ.
ಹಾವರ್ಡ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಪೀಸಸ್ ಆಫ್ ವರ್ಲ್ಡ್ ಲಿಟರೇಚರ್ ಎಂಬ ತನ್ನ ಚೊಚ್ಚಲ ಸಾಹಿತ್ಯ ಕೋರ್ಸ್‌ನ್ನು ‘ಅಮನ’ ಈಗಾಗಲೇ ಮುಗಿಸಿದ್ದಾಳೆ. ಇದೇ ಸಂದರ್ಭದಲ್ಲಿ ಈ ಬಾಲೆ, ‘ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ‘ಕಿರಿಯ ಲೇಖಕಿ’ ಎಂದು ಗುರುತಾಗಿದ್ದಾಳೆ. 14 ವರ್ಷ ವಯಸ್ಸಿನಲ್ಲಿ ವಿವಿಧ ಭಾಷೆಗಳಲ್ಲಿ ಮೂರು ಪುಸ್ತಕಗಳನ್ನು ಬರೆದಿರುವ ಈ ಕಿರಿಯ ಕವಯಿತ್ರಿಗೆ ಸಾರಸ್ವತ ಲೋಕದ ಗಣ್ಯರಿಂದ ಅಭಿನಂದನೆಯ ಹೂಮಳೆಯಾಗುತ್ತಿದೆ.






















































ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಮತ್ತು ಜೈವಂತ್ ಕುಮಾರ್ ಪುತ್ರಿ ‘ಅಮನ ಜೆ.ಕುಮಾರ್’, ಬಾಲ್ಯದಲ್ಲೇ ಸಾರಸ್ವತ ಲೋಕದಲ್ಲಿ ಗಮನಸೆಳೆದಿದ್ದಾರೆ. ‘ಅಮನ’ ರಚಿಸಿರುವ ವಿವಿಧ ಕೃತಿಗಳು ಜನಪ್ರಿಯವಾಗಿದ್ದು, ಇದೀಗ ಈ ಸಾಧನೆಯ ಜೊತೆ ಮತ್ತಷ್ಟು ಪ್ರಶಸ್ತಿಗಳು ಈ ಸಾಧನೆಯ ಕಿರೀಟಕ್ಕೆ ಗರಿ ಇಟ್ಟಂತಿದೆ