ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿಂದಿನ ಕಾಣದ “ಕೈ”ಗಳ ವಿರುದ್ಧ ಕ್ರಮ ಯಾವಾಗ ಎಂದು ಬಿಜೆಪಿ ಪ್ರಶ್ನಿಸಿದೆ.
ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವೆಸಗುವುದಕ್ಕೆ ಕಾಂಗ್ರೆಸ್ ಸರ್ಕಾರ ಸದಾ “ಸಿದ್ದ” ಎಂದು ಟೀಕಿಸಿರುವ ಬಿಜೆಪಿ, ವಿಶೇಷ ದುರ್ಬಲ ಬುಡಕಟ್ಟು ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ 83 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರ ತಿಂದು ತೇಗಿದೆ ಎಂದು ದೂರಿದೆ.
ಹಗರಣ ಬಯಲಾದ ತಕ್ಷಣ ನಾಮಕಾವಸ್ಥೆಗೆ ಕಲ್ಲೇಶ್ ಎಂಬ ಅಧಿಕಾರಿಯನ್ನು ಅಮಾನತು ಮಾಡಿ ಸಿಎಂ ಸಿದ್ದರಾಮಯ್ಯ “ಕೈ”ತೊಳೆದುಕೊಂಡಿದ್ದಾರೆ ಎಂದು ದೂರಿರುವ ಬಿಜೆಪಿ, ಹಗರಣದ ಹಿಂದಿನ ಕಾಣದ “ಕೈ”ಗಳ ವಿರುದ್ಧ ಕ್ರಮ ಯಾವಾಗ ಎಂದು ಸಿಎಂ ಅವರನ್ನು ಪ್ರಶ್ನಿಸಿದೆ.
ವಾಲ್ಮೀಕಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡಿರುವ ಮಹಾ ಮೋಸವನ್ನು ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು ಎಳೆ ಎಳೆಯಾಗಿ ವಿವರಿಸಿದ್ದು, ಇದೇ ಜೂನ್ 28 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿದೆ.
ಇದೇ ವೇಳೆ, ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರದ ಕುರಿತು ಸರ್ಕಾರ ಎಸ್ಐಟಿ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ಕೇವಲ ಅಧಿಕಾರಿ, ಸಚಿವರ ತಲೆದಂಡಕ್ಕೆ ಸೀಮಿತವಾಗುವ ಪ್ರಕರಣವಲ್ಲ, ಸ್ವತಃ ಮುಖ್ಯಮಂತ್ರಿಗಳೇ ಈ ಪ್ರಕರಣದ ಹೊಣೆ ಹೊರಬೇಕು ಎಂದಿದ್ದಾರೆ.
ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರದ ಕುರಿತು ಸರ್ಕಾರ ಎಸ್ಐಟಿ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದೆ. ಇದು ಕೇವಲ ಅಧಿಕಾರಿ, ಸಚಿವರ ತಲೆದಂಡಕ್ಕೆ ಸೀಮಿತವಾಗುವ ಪ್ರಕರಣವಲ್ಲ, ಸ್ವತಃ ಮುಖ್ಯಮಂತ್ರಿಗಳೇ ಈ ಪ್ರಕರಣದ ಹೊಣೆ ಹೊರಬೇಕು.
– ಶ್ರೀ @BYVijayendra, ರಾಜ್ಯಾಧ್ಯಕ್ಷರು#ResignSiddaramaiah#CorruptCongress pic.twitter.com/O7Tmkp8yCs
— BJP Karnataka (@BJP4Karnataka) June 26, 2024






































































