ಮಂಗಳೂರು: ಅಭಿವೃದ್ಧಿಯ ದಿಶೆಯಲ್ಲಿ ವಿಭಿನ್ನ ಪ್ರಯೋಗಗಳಿಂದ ಗಮನಸೆಳೆಯುತ್ತಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೈನ್ಯ ಹಾಗೂ ಕಮಲ ಕಾರ್ಯಕರ್ತರು ಕರಾವಳಿಯಲ್ಲಿ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಸ್ವಾವಲಂಬಿ ನಡೆಯಲ್ಲೇ ಮುನ್ನುಗ್ಗುತ್ತಿರುವ ಈ ಸ್ವಯಂಸೇವಕರು ಇದೀಗ ಪ್ರಕೃತಿ ಮಾತೆಯ ಕೈಂಕರ್ಯದಲ್ಲೂ ಮುಂಚುಣಿಯಲ್ಲಿದ್ದಾರೆ. ಇದಕ್ಕೆ ತೆಂಕಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಯಿತು.
ಬಿಜೆಪಿ ತೆಂಕಬೆಳ್ಳೂರು ಬೂತ್-48ರ ವತಿಯಿಂದ ದಿವಂಗತ ಶ್ಯಾಮ ಪ್ರಸಾದ್ ಮುಖರ್ಜಿಯವರ ಬಲಿದಾನ ಹಾಗೂ ಜೀವನಾದರ್ಶವನ್ನು ನೆನಪಿಸುವ ಕಾರ್ಯಕ್ರಮ ನೆರವೇರಿತು. ಈ ಸ್ನರಣೀಯ ಕಾರ್ಯಕ್ರಮದ ಅಂಗವಾಗಿ ವೃಕ್ಷಾರೋಪಣದ ವ್ಯವಸ್ಥೆ ಅರ್ಥಪೂರ್ಣವೆನಿಸಿತು.
ಇಂದು ಬೆಳಿಗ್ಗೆ ಧನುಪೂಜೆಯಿಂದ ಕಾಗುಡ್ಡೆ ಸಂಪರ್ಕಿಸುವ ನೂತನ ದಿ. ಪಂಡಿತ್ ದಿನಾದಯಾಳ್ ಉಪಾಧ್ಯಯ ರಸ್ತೆಯ ಇಕ್ಕೆಲಗಳಲ್ಲಿ ಸಸಿನೆಡುವ ಮೂಲಕ ಈ ಅಭಿಯಾನಕ್ಕೆ ಮುನ್ನುಡಿ ಬರೆಯಲಾಯಿತು. ಬಿಜೆಪಿ ದ.ಕ. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪೊಳಲಿ ವೆಂಕಟೇಶ್ ನಾವಡ ಅವರ ಉಪಸ್ಥಿತಿಯಲ್ಲಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಕಾರ್ಯಕ್ರಮವನ್ನು ಅಭಿಯಾನ ರೀತಿಯಲ್ಲಿ ಮುಂದುವರಿಸುವುದು ಹಾಗೂ ಪ್ರಕೃತಿ ಪ್ರಿಯರನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಪ್ರಾಕೃತಿಕ ಅಸಮತೋಲನ ನಿವಾರಣೆಗೆ ಪ್ರಯತ್ನ ಮಾಡುವ ಪರಿಕಲ್ಪನೆ ಈ ಯುವಕರ ಸೃನ್ಯದ್ದು. ಈಗಾಗಲೇ ‘ಆಸರೆ’ ಮೂಲಕ ಕಡುಬಡವರಿಗೆ ಮನೆಕಟ್ಟಿಕೊಡುವ ಕಾರ್ಯಕ್ರರಮದೊಂದಿಗೆ ನಾಡಿನ ಗಮನಸೆಳೆದಿರುವ ಇದೇ ಯುವಕರು, ಬಂಟ್ವಾಳ ಸೇವಾ ಭಾರತಿ ಸಾರಥ್ಯದ ಕೋವಿಡ್ ಕೇರ್ ಕಾರ್ಯದಲ್ಲೂ ಕೈಜೋಡಿಸಿ ಮಾನವೀಯತೆಗೆ ಹೆಸರಾಗಿದ್ದಾರೆ. ಇದೀಗ ಜನಸಾಮಾನ್ಯರಲ್ಲಿ ಹಸಿರು-ಉಸಿರಿನ ಕೈಂಕರ್ಯ ಮೂಲಕ ಜಾಗೃತಿ ಕಹಳೆ ಮೊಳಗಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಇಂದು ನಡೆದ ಅನನ್ಯ ಕಾರ್ಯಕ್ರಮದಲ್ಲಿ,
ಬಡಗಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಹಾಸ್ ಅಜಿನಡ್ಕ, ರಘುವೀರ್ ಆಚಾರ್ಯ,
ತೆಂಕಬೆಳ್ಳೂರು ಬಿಜೆಪಿ ನಾಯಕರಾದ ತಿರುಮಲೇಶ್ ಬೆಳ್ಳೂರು, ಪ್ರೀತಮ್ ಕಮ್ಮಾಜೆ, ತಿಮ್ಮಪ್ಪ ಕಮ್ಮಾಜೆ,
ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲ್ಲೂಕು ಮಾತೃ ಸುರಕ್ಷಾ ಪ್ರಮುಖ್ ಶಿವಪ್ರಸಾದ್ ಧನುಪೂಜೆ, ಕಮ್ಮಾಜೆಯ ನಾಗಶ್ರೀ ಮಿತ್ರ ವೃಂದದ ಪ್ರಮುಖ್ ದುರ್ಗಾಪ್ರಸಾದ್, ಹಿಂದೂ ಜಾಗರಣ ವೇದಿಕೆ ಮುಖಂಡ ರಾಮಚಂದ್ರ ವರಕೋಡಿ ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾದರು.