ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ 25 ಸ‍್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಪ್ರಮುಖ ದಿನಗಳು ಹೀಗಿವೆ:
- ನವೆಂಬರ್ 23: ನಾಮಪತ್ರ ಸಲ್ಲಿಸಲು ಕೊನೆಯ ದಿನ.
- ನವೆಂಬರ್ 24: ನಾಮಪತ್ರಗಳ ಪರಿಶೀಲನೆ.
- ನವೆಂಬರ್ 26: ನಾಮಪತ್ರ ಹಿಂಪಡೆಯಲು ಕೊನೆಯ ದಿನ.
- ಡಿಸೆಂಬರ್ 10: ಮತದಾನ .
- ಮತದಾನ ಅವಧಿ: ಬೆಳಿಗ್ಗೆ 8 ರಿಂದ ಸಂಜೆ 4 ವರೆಗೆ
- ಡಿಸೆಂಬರ್ 14: ಮತಗಳ ಎಣಿಕೆ, ಫಲಿತಾಂಶ.