ಸಂಗೀತ ಯಾರಿಗೆ ತಾನೇ ಇಷ್ಟವಾಗಲ್ಲ. ಸರ್ವ ಬೇಗುದಿಗೂ ಸಂಗೀತ ಮದ್ದು ಎಂಬುದು ಬಲ್ಲವರ ಮಾತು. ಮಧುರ ಹಾಡಿಗೆ ಮನ ಸೋಲುವವರು ಯಾರೂ ಇಲ್ಲ. ಇಲ್ಲೊಬ್ಬ ಸಂಗೀತ ರಸಿಕ ಮಾಡಿದ್ದೇನು ಗೊತ್ತಾ..? ಹಾಡುಗಾರ್ತಿಯ ಗಾನಕ್ಕೆ ಮನಸೋತ ಶ್ರೀಮಂತನೊಬ್ಬ ಬಕೆಟ್ ತುಂಬಾ ನೋಟುಗಳನ್ನು ತಂದು ಸಂಗೀತ ಚೆಲುವೆಯ ಮೇಲೆ ಸುರಿಮಳೆಗೈದಿದ್ದಾನೆ.
શ્રી સમસ્ત હિરાવાડી ગ્રુપ દ્વારા તુલસી વિવાહનું આયોજન કરવામાં આવ્યું છે, જેમાં ગઇકાલે લોકડાયરાનુ આયોજન કરવામા આવેલુ. આપના સૌના અમૂલ્ય પ્રેમ માટે આપ સૌનો ખુબ ખુબ આભાર। #UrvashiRadadiya #Folk #Music #MoneyRain #LokDayro pic.twitter.com/VI6gdatb6b
— Urvashi Radadiya (@UrvashiRadadiya) November 15, 2021
ಇದು ನಡೆದದ್ದು ಮೋದಿಯ ನಾಡು ಗುಜರಾತ್ನಲ್ಲಿ. ಕೆಲವು ದಿನಗಳ ಹಿಂದೆ ಅಹಮದಾಬಾದ್‌ನ ಶ್ರೀಮಂತ ಕುಟುಂಬವೊಂದರ ಮದುವೆಯಲ್ಲಿ ಜನಪ್ರಿಯ ಜಾನಪದ ಗಾಯಕಿ ಊರ್ವಶಿ ರಾಡಿಯಾ ಭಾಗವಹಿಸಿದ್ದರು. ಸಂಗೀತ ಕಾರ್ಯಕ್ರಮದಲ್ಲಿ ಊರ್ವಶಿ ರಾಡಿಯಾ ಅವರ ಗಾಯನ ನೆರೆದಿದ್ದ ಜನರ ಆಕರ್ಷಣೆಯ ಕೇಂದ್ರಬಿಂದುವಾಯಿತು.
ಅಲ್ಲಿದ್ದ ಜನ ಇವರ ಸಂಗೀತವನ್ನು ಎಷ್ಟು ಖುಷಿಪಟ್ಟರೆಂದರೆ, ಎಲ್ಲರೂ ಗರಿ ಗರಿ ನೋಟುಗಳನ್ನು ಈ ಸಂಗೀತ ಶಾರದೆಯತ್ತ ಎಸೆದು ಸಂಭ್ರಮಿಸುತ್ತಿದ್ದರು. ಅದರಲ್ಲೂ ಶ್ರೀಮಂತ ಅಭಿಮಾನಿಯೊಬ್ಬ ಬಕೆಟ್ ತುಂಬಾ ಗರಿಗರಿ ನೋಟನ್ನು ತಂದು ಊರ್ವಶಿ ರಾಡಿಯಾ ಮೇಲೆ ಸುರಿಮಳೆಗೈದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಲ್ಲರ ಗಮನ ಕೇಂದ್ರೀಕರಿಸಿದೆ.
ಊರ್ವಶಿ ಅವರು ಗುಜರಾತ್‌ನ ಖ್ಯಾತ ಗಾಯಕಿ. ಅವರ ಭಜನ್ ಜನಪ್ರಿಯತೆ ಪಡೆದಿದೆ. ಅವರದ್ದೇ ಆದ ಅಭಿಮಾನಿ ಕೋಟಿಯನ್ನು ಊರ್ವಶಿ ಹೊಂದಿದ್ದಾರೆ.
ಊರ್ವಶಿ ರಾಡಿಯಾ ‘ಭಜನ್’ ವೀಡಿಯೋ.
ಈ ನಡುವೆ ಗಾಯಕಿ ಊರ್ವಶಿ ರಾಡಿಯಾ ಅವರು ತಮಗೆ ಅಭಿಮಾನಿಗಳು ಸಮರ್ಪಿಸಿದ ಹಣವನ್ನೆಲ್ಲಾ ಬಡವರ ಮದುವೆ ಮತ್ತು ಬಡ ಹೆಣ್ಣು ಮಕ್ಕಳಿಗಾಗಿ ಖರ್ಚು ಮಾಡುವುದಾಗಿ ಹೇಳಿದ್ದಾರೆ. ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.