ಅವೆಷ್ಟೋ ಮಂದಿ ರಾತ್ರಿ ಬೆಳಗಾಗುವುದರೊಳಗೆ ಜಗತ್ಪ್ರಸಿದ್ಧರಾಗಿದ್ದಿದೆ. ಇಲ್ಲೊಬ್ಬಳು ಪ್ರತಿಭಾನ್ವಿತೆ ಅದೇ ಪಟ್ಟಿಗೆ ಸೇರಿದ್ದಾಳೆ.
‘ಮನಿಕೆ ಮಾಗೆ ಹಿತೆ’ ಹಾಡಿನಿಂದ ಗಾಯಕಿ ಯೋಹಾನಿ ಡಿ ಸಿಲ್ವಾ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ. ಈಕೆ ಹಾಡಿದ ‘ಮನಿಕೆ ಮಾಗೆ ಹಿತೆ’ ಹಾಡಿನ ಮೋಡಿ ಹೇಗಿದೆ ಅಂದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಗಾಯಕಿಯದ್ದೇ ಹವಾ..
ಈ ಹಾಡಿನ ಜನ್ರಪ್ರಿಯತೆಯನ್ನು ಗಮನಿಸಿದ ಶ್ರೀಲಂಕಾ ಸರ್ಕಾರ ರಾಜಧಾನಿ ಕೊಲೊಂಬೋದಲ್ಲಿ ಸನ್ಮಾನಿಸಲು ನಿರ್ಧರಿಸಿದೆ.
ನವೆಂಬರ್ 23 ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದ್ದು, ಪ್ರಧಾನಿ ಮಹಿಂದಾ ರಾಜಪಕ್ಸೆ, ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಕೂಡಾ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.