ದೆಹಲಿ: ಸದ್ಯದಲ್ಲೇ ಮಿನಿ ಮಹಾಸಮರ ನಢಯಲಿದೆ. 2022ರಲ್ಲಿ ಉತ್ತರಪ್ರದೇಶ, ಉತ್ತರಖಂಡ್, ಗೋವಾ, ಪಂಜಾಬ್, ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ ಪಂಜಾಬ್ ಹಾಗೂ ಉತ್ತರಪ್ರದೇಶ ತೀವ್ರ ಕುತೂಹಲದ ಅಖಾಡವೆನಿಸಿದೆ. ಈ ಎರಡೂ ರಾಜ್ಯಗಳು ಈಗಲೇ ಭರ್ಜರಿ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದು ಉತ್ತರಪ್ರದೇಶದಲ್ಲಿ ಯೋಗಿ ಅಧಿಪತ್ಯ ಮುಂದುವರಿಯುತ್ತಾ? ಪಂಜಾಬ್‌ನ ಅಧಿಕಾರ ‘ಕೈ’ಯಲ್ಲಿ ಇರುತ್ತಾ ಎಂಬ ಕುತೂಹಲ ಎಲ್ಲರದ್ದು.
ಇದೀಗ ಹೊರಬಿದ್ದಿರುವ ಸಮೀಕ್ಷೆಯೊಂದು ಕುತೂಹಲಕಾರಿ ಬೆಳವಣಿಗೆಯ ಸುಳಿವು ನೀಡಿದೆ.
ಏನಿದು ಸಮೀಕ್ಷೆ..?
2022ರಲ್ಲಿ ಉತ್ತರ ಪ್ರದೇಶ, ಉತ್ತರಖಂಡ, ಗೋವಾ, ಪಂಜಾಬ್, ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ರಾಜ್ಯಗಳಲ್ಲಿ ಜನರ ಒಲವು ಯಾರತ್ತ ಇದೆ? ಯಾರು ಗೆಲ್ಲಬಹುದು ಎಂದು ಎಬಿಪಿ-ಸಿ’ಓಟರ್ಸ್ ಸಮೀಕ್ಷೆ ನಡೆಸಿದೆ.
ಉತ್ತರಪ್ರದೇಶ, ಉತ್ತರಖಂಡ್, ಗೋವಾ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸುಳಿವು ಸಿಕ್ಕಿದ್ದು, ಪಂಜಾಬ್‌ನಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆಗಳಿದ್ದು ಆಮ್ ಆದ್ಮಿ ಪಕ್ಷ ದೊಡ್ಡಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಹೇಳಿದೆ. ಮಣಿಪುರ ಕೂಡಾ ಅತಂತ್ರ ಫಲಿತಾಂಶಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಅಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ ಎಂದು ಸಮೀಕ್ಷಾ ವರದಿ ಹೇಳುತ್ತದೆ.
ಬಲಾಬಲ ಹೀಗಿರಬಹುದು..
ಉತ್ತರ ಪ್ರದೇಶ: (ಒಟ್ಟು 403)
- ಬಿಜೆಪಿ 241-249
- ಎಸ್‍ಪಿ 130-138,
- ಬಿಎಸ್‍ಪಿ 15-19
- ಕಾಂಗ್ರೆಸ್ 03-07
ಪಂಜಾಬ್ (ಒಟ್ಟು:117)
- ಆಮ್ ಆದ್ಮಿ 49-55
- ಕಾಂಗ್ರೆಸ್ 30-47
- ಅಕಾಲಿದಳ 17-25
- ಬಿಜೆಪಿ 0-1
ಉತ್ತರಾಖಂಡ (ಒಟ್ಟು:70)
- ಬಿಜೆಪಿಗೆ 42-46
- ಕಾಂಗ್ರೆಸ್ 21-25
- ಆಮ್ ಆದ್ಮಿ 0-4
- ಇತರರು 0-2
ಗೋವಾ (ಒಟ್ಟು 40)
- ಬಿಜೆಪಿ 24-28
- ಆಮ್ ಆದ್ಮಿ 3-7
- ಕಾಂಗ್ರೆಸ್ 1-5
- ಇತರರು 4-8
ಮಣಿಪುರ (ಒಟ್ಟು 60)
- ಬಿಜೆಪಿ 21-25
- ಕಾಂಗ್ರೆಸ್ 18-22
- ನಾಗಾ ಪೀಪಲ್ಸ್ ಫ್ರಂಟ್ 4-8
ಇತರರು 1-5