ಬೆಂಗಳೂರು: ಅಸ್ಪೃಶ್ಯತೆ ಸಮಾಜಕ ಪಿಡುಗು. ಅದಿನ್ನೂ ದೂರವಾಗಿಲ್ಲ ಎಂಬ ಕೊರಗು ಪ್ರಜ್ಞಾವಂತರದ್ದು. ಈ ಕುರಿತು ನಡೆದ ಕೆಪಿಸಿಸಿ ಮಾಧ್ಯಮ ವಿಭಾಗದ ಸಂವಾದ ಕಾರ್ಯಕ್ರಮ ಗಮನಸೆಳೆಯಿತು. ಸಂವಾದದಲ್ಲಿ ಪ್ರಶ್ಬೆಯೊಂದಕ್ಕೆ ಉತ್ತರಿಸಿದ ಕೆಪಿಸಿಸಿ ಮಾಧ್ಯಮ ವಕ್ತಾರೆ ಭವ್ಯಾ ನರಸಿಂಹಮೂರ್ತಿ, ಈ ಪಿಡುಗಿಗೆ ಶಿಕ್ಷಣವೇ ಮದ್ದು ಎಂಬ ಸೂತ್ರವನ್ನು ಮುಂದಿಟ್ಟರು. ಶಿಕ್ಷಣದಿಂದ ಸುಧಾರಣೆ ಹೇಗೆ ಸಾಧ್ಯ ಎಂಬ ಭವ್ಯಾ ಅವರ ಅಭಿಪ್ರಾಯದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಯುವಜನ ಸಮೂಹದಿಂದ ಈ ವೀಡಿಯೋಗೆ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.
ಯುವ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರರಾದ @Bhavyanmurthy 👏 pic.twitter.com/7KsVqN2Pkj
— ಭಾರತ ಐಕ್ಯತಾ ಯಾತ್ರೆ ಕರ್ನಾಟಕ (@BharatJodo123) November 28, 2021