ಉಡುಪಿ: ವಿಜಯದಶಮಿ ದಿನವಾದ ಶುಕ್ರವಾರ ದೇವಳ ನಾಡು ಉಡುಪಿ ಅನನ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ನಡೆದ “ದುರ್ಗಾ ದೌಡ್” ಕಾರ್ಯಕ್ರಮ ಕೇಸರಿ ಕಾರ್ಯಕರ್ತರ ಶಕ್ತಿ ಪ್ರದರ್ಶನ ಎಂಬಂತಾಯಿತು.
ಕಡಿಯಾಳಿಯ ಶ್ರೀ ಮಹಿಷಮರ್ಧಿನಿ ದೇವಸ್ಥಾನದಿಂದ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಳದವರೆಗೆ ನಡೆದ “ದುರ್ಗಾ ದೌಡ್” ಹಿಂದೂ ಶಕ್ತಿ ಸಂಚಲನ ಕಾರ್ಯಕ್ರಮ ನಡೆಯಿತು. ಶಾಸಕ ಶಾಲು, ಕೇಸರಿ ವಸ್ತ್ರ ಧರಿಸಿ ಕಾರ್ಯಕರ್ತರನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದ ದೃಶ್ಯವು ಉಡುಪಿಯ ಬೀಡಿಯಲ್ಲಿ ಕೇಸರಿ ಪ್ರವಾಹ ಹರಿದಂತೆ ಭಾಸವಾಯಿತು.