ತುಮಕೂರು: ಕಲ್ಪತರು ನಾಡು ತಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೂಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ವಿಫಲವಾಗಿದೆ. ಸಂಸತ್ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಕಾರಣವಾಗಿದ್ದ ರಾಜಣ್ಣ ಕುಟುಂಬವನ್ನು ಈ ಬಾರಿ ಪರಿಷತ್ ಚುನಾವಣೆಯಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಲು ಜೆಡಿಎಸ್ ನಾಯಕರು ಶತ ಪ್ರಯತ್ನ ನಡೆಸಿದ್ದರು. ಆದರೆ ಫಲಿತಾಂಶ ಕಾಂಗ್ರೆಸ್ ಪರ ಬಂದಿದೆ.
ತುಮಕೂರು ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಅವರು ಬಿಜೆಪಿಯ ಎಮ್.ಎನ್. ಲೋಕೇಶ್‌ಗೌಡ ಹಾಗೂ ಜೆಡಿಎಸ್‌ನ ಆರ್.ಅನಿಲ್‌ಕುಮಾರ್ ವಿರುದ್ದ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ:
- ರಾಜೇಂದ್ರ ರಾಜಣ್ಣ (ಕಾಂಗ್ರೆಸ್) 3,135 ಮತಗಳು,
- ಎಮ್.ಎನ್. ಲೋಕೇಶ್‌ಗೌಡ (ಬಿಜೆಪಿ) 2,050 ಮತಗಳು
- ಆರ್.ಅನಿಲ್‌ಕುಮಾರ್ (ಜೆಡಿಎಸ್) 1,298 ಮತಗಳು