ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ‘ರಾಜಭವನ ಚಲೋ’ ಮೂಲಕ ಶಕ್ತಿ ಪ್ರದರ್ಶನ ಮಾಡಿರುವ ಪ್ರದೇಶ್ ಕಾಂಗ್ರೆಸ್ ಇದೀಗ ಮತ್ತೊಮ್ಮೆ ಅಖಾಡಕ್ಕೆ ಧುಮುಕಲು ಸಜ್ಜಾಗಿದೆ.
ಈ ಬಾರಿ ಗಣರಾಜ್ಯೋತ್ಸವ ದಿನದಂದು ರೈತರು ನಡೆಸಲುದ್ದೇಶಿಸಿರುವ ಟ್ಟಾಕ್ಟರ್ ಪೆರೇಡ್‌ನಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಸಮರ ಮುಂದುವರಿಸಲು ಕೈ ನಾಯಕರು ಕಾರ್ಯತಂತ್ರ ರೂಪಸಿದ್ದಾರೆ. ದೆಹಲಿಯಲ್ಲಿ ನಡೆಯಬಹುದಾದ ಟ್ರಾಕ್ಟರ್ ಚಳವಳಿಯಂತೆ ಬೆಂಗಳೂರಿನಲ್ಲೂ ನಡೆಸಿ ಸರ್ಕಾರವನ್ಬು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಇದಾಗಿದೆ.
ಅಖಾಡದಲ್ಲಿ ಕಿಸಾನ್ ಕಾಂಗ್ರೇಸ್
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯದಲ್ಲಿ ಸಚಿನ್ ಮಿಗಾ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳನ್ನು ನಡೆಸಿರುವ ಕಿಸಾನ್ ಕಾಂಗ್ರೆಸ್, ಜನವರಿ 26ರಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹೋರಾಟವನ್ನು ಯಶಸ್ವಿಗೊಳಿಸಲು ಪಣತೊಟ್ಟಿದೆ.
ಈ ಕುರಿತು ಹೇಳಿಕೆ ನೀಡಿರುವ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜನವರಿ 26ರಂದು ರೈತ ವಿರೋದಿ ಮಸೂದೆಯನ್ನು ವಿರೋಧಿಸಿ ನಡೆಸಲಿದೆ. ಅಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೆಡೆಯಲಿರುವ ಟ್ರಾಕ್ಟರ್ ಚಳುವಳಿಯನ್ನು ಕರ್ನಾಟಕ ಕಿಸಾನ್ ಕಾಂಗ್ರೆಸ್ ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ. ಅಂದು ಟ್ರಾಕ್ಟರ್‌ಗಳೊಂದಿಗೆ ಕಿಸಾನ್ ನಾಯಕರು, ಪದಾಧಿಕಾರಿಗಳು ಬಾಗವಹಿಸುತ್ತಾರೆ ಎಂದವರು ಹೇಳಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕಿಸಾನ್ ಕಾಂಗ್ರೆಸ್ ವತಿಯಿಂದ ಟ್ರಾಕ್ಟರ ಚಳುವಳಿ ನಡೆಸಲಾಗುವುದು ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.