ಪಣಜಿ: ಪ್ರವಾಸಿಗರ ಸ್ವರ್ಗ ತಾಣ ದೂದ್ ಸಾಗರ್ ಜಲಪಾತ ಇದೀಗ ಜಲಶ್ರೀಮಂತಿಕೆಯಿಂದ ಕಂಗೊಳಿಸುತ್ತಿವೆ. ಆದರೆ ಮುಂಗಾರು ಮಳೆಯ ಅಬ್ವರ ಹಾಗೂ ನೆರೆ ಹಾವಳಿಯಿಂದಾಗುತ್ತಿರುವ ಅನಾಹುತಗಳ ಕಾರಣದಿಂದಾಗಿ ದೂದ್ ಸಾಗರ್ ಜಲಪಾತ ಬಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ದೌಡಾತಿಸುತ್ತಿದ್ದಾರೆ.
ವಾರಾಂತ್ಯದ ರಜಾದಿನವಾದ ಭಾನುವಾರದಂದು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ದೂದ್‌ಸಾಗರ ನೋಡಲು ತೆರಳಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗಮಧ್ಯೆ ತಡೆದಿದ್ದಾರೆ. ಗೋವಾ ಸರ್ಕಾರದ ನಿರ್ಬಂಧ ಸಡಿಲಿಕೆಯಾದ ನಂತರ ಬನ್ಬಿ ಎಂದು ಪೊಲೀಸರು ಮನವೊಲಿಸಿ ಪ್ರವಾಸಿಗರನ್ನು ವಾಪಸ್ ಕಳುಹಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ರಿದೆ.
End this Herd Mentality 🙏
📍Dudhsagar Falls trek today 😭🚫 pic.twitter.com/Ldk93RN5dQ
— Visit Udupi (@VisitUdupi) July 16, 2023