ಟೋಕಿಯೋ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ಮತ್ತು ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸುಜುಕಿ ಮೋಟಾರ್ ಕಾರ್ಪೊರೇಷನ್ನ ಅಧಿಕಾರಿಗಳನ್ನು ಟೋಕಿಯೋದಲ್ಲಿ ಸೋಮವಾರ ಭೇಟಿಯಾದರು .
ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಿದರು. ಜತೆಗೆ, ಕರ್ನಾಟಕದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವಂತೆ ಕೋರಿದರು.
ಸುಜುಕಿ ಮೋಟಾರ್ ಕಾರ್ಪೊರೇಶನ್ನ ಇಂಡಿಯಾ ಆಟೋಮೊಬೈಲ್ ಡಿಪಾರ್ಟ್ಮೆಂಟ್ನ ಪ್ರಧಾನ ವ್ಯವಸ್ಥಾಪಕ ಹಿಡಕಿ ತಗುಚಿ, ನಿರ್ದೇಶಕ ಮತ್ತು ಹಿರಿಯ ವ್ಯವಸ್ಥಾಪಕ ಕೆಂಜಿ ಸೈಟೊ, ಕಂಪನಿಯ ಪಬ್ಲಿಕ್ ಆಫೇರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಕಝುಹಿರೋ ಹಟ್ಟೋರಿ ಹಾಗೂ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ವಾಣಿಜ್ಯ) ಮನೋಜ್ ಸಿಂಗ್ ನೇಗಿ ಉಪಸ್ಥಿತರಿದ್ದರು.