ಬೆಂಗಳೂರು: ಟಿಪ್ಪು ಸುಲ್ತಾನ್ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮರ ನಡೆಯುತ್ತಲೇ ಇದೆ. ಟಿಪ್ಪು ವಿಚಾರದಲ್ಲಿ ಆರೆಸ್ಸೆಸ್ನ ಸೈದ್ದಾಂತಿಕ ನಿಲುವನ್ನು ಬಿಜೆಪಿ ಕಾರ್ಯಕರ್ತರು ಸಮರ್ಥಿಸಿಕೊಳ್ಳುತ್ತಾರಾದರೂ, ಕಮಲ ಪಕ್ಷದ ನಾಯಕರು ಮಾತ್ರ ತಮ್ಮ ಹಿಂದಿನ ನಡೆಯಿಂದಾಗಿ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತಿದೆ ಕಾಂಗ್ರೆಸ್ ಮಾಡಿರುವ ಟ್ವೀಟ್.
ಟಿಪ್ಪು ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವ ಬಿಜೆಪಿಗೆ ಈ ಬಾರಿ ಕೈ ಪಕ್ಷವು ಹಳೇಯ ಫೊಟೋಗಳನ್ನು ಟ್ಯಾಗ್ ಮಾಡಿ ಕಟು ಟೀಕೆ ಮಾಡಿದೆ. ಬಿಜೆಪಿ ನಾಯಕರು ಟಿಪ್ಪು ಅನುಯಾಯಿಗಳಂತೆ ಫೋಸ್ ನೀಡಿದ್ದ ಹಳೇಯ ಫೊಟೋಗಳನ್ನು ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ.
‘ನಾವು ಕೇಳುತ್ತಲೇ ಇದ್ದೇವೆ, ಆದರೆ ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ ಇಲ್ಲ, ಬಿಜೆಪಿಗೆ ದಮ್ಮು ತಾಕತ್ತು ಇದ್ದರೆ ಉತ್ತರಿಸಲಿ’ ಎಂದಿರುವ ಕಾಂಗ್ರೆಸ್, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಬಿಜೆಪಿಗರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದೇಕೆ? ಟಿಪ್ಪುವನ್ನು ಹೊಗಳಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಪುಸ್ತಕ ಹೊರತಂದಿದ್ದೇಕೆ? ರಾಷ್ಟ್ರಪತಿ ಟಿಪ್ಪು ಹೋಗಳಿದ್ದೇಕೆ? ಎಂದು ಟ್ವಿಟ್ಟರ್ನಲ್ಲಿ ಪ್ರಶ್ನೆಗಳನ್ನು ಮುಂದಿಟ್ಟಿದೆ.
ನಾವು ಕೇಳುತ್ತಲೇ ಇದ್ದೇವೆ,
ಆದರೆ ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ ಇಲ್ಲ,@BJP4Karnataka ಗೆ ದಮ್ಮು ತಾಕತ್ತು ಇದ್ದರೆ ಉತ್ತರಿಸಲಿ,◆ಬಿಜೆಪಿಗರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದೇಕೆ?
◆ಟಿಪ್ಪುವನ್ನು ಹೊಗಳಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಪುಸ್ತಕ ಹೊರತಂದಿದ್ದೇಕೆ?
◆ರಾಷ್ಟ್ರಪತಿ ಟಿಪ್ಪು ಹೋಗಳಿದ್ದೇಕೆ? pic.twitter.com/i3hKH3F918— Karnataka Congress (@INCKarnataka) October 3, 2022



















































