ಬೆಂಗಳೂರು: ತೀರ್ಥಹಳ್ಳಿ ತಾಲೂಕಿಗೆ, ರಾಷ್ಟ್ರೀಯ ಆಯುಷ್ ಅಭಿಯಾನ, ಯೋಜನೆಯಡಿಯಲ್ಲಿ, ಹತ್ತು ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು, ರಾಜ್ಯ ಸರಕಾರ, ಇಂದು ಆದೇಶ ಹೊರಡಿಸಿದ್ದು, ಸುಮಾರು 650 ಲಕ್ಷ ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿದೆ.
ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಮಾಹಿತಿ ಹಂಚಿಕೊಂಡಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ, ಆಯುರ್ವೇದ ಆಸ್ಪತ್ರೆ ಮಂಜೂರು ಮಾಡಲು, ಸಾರ್ವಜನಿಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ಸರಕಾರ, ಆಸ್ಪತ್ರೆ ಸ್ಥಾಪನೆ ಸಂಬಂಧ, ಮನವಿಯನ್ನು ಪುರಸ್ಕರಿಸಿ, ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಆಯುರ್ವೇದ ಆಸ್ಪತ್ರೆಯನ್ನು ತಾಲೂಕು ಕೇಂದ್ರ ತೀರ್ಥಹಳ್ಳಿ ಯಲ್ಲಿ, ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಹಾಗೂ ತಕ್ಷಣಕ್ಕೆ ಅವಶ್ಯ ವಿರುವ, ಖಾಯಂ ಹುದ್ದೆಗಳಾದ ವೈದ್ಯಕೀಯ ಅಧೀಕ್ಷಕರು ಹಾಗೂ ಮೂರು ವೈದ್ಯಾಧಿಕಾರಿಗಳು ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಳ್ಳಲು ಅನುಮತಿಸಲಾಗಿದೆ ಎಂದವರು ವಿವರಿಸಿದ್ದಾರೆ.
ಈ ನಡುವೆ, ತೀರ್ಥಹಳ್ಳಿ ತಾಲೂಕಿನಲ್ಲಿ ಆಯುರ್ವೇದ ಆಸ್ಪತ್ರೆಗೆ ಮಂಜೂರಾತಿ ಪಡೆದುಕೊಳ್ಳಲು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ವಿಶೇಷ ಪ್ರಯತ್ನ ನಡೆಸಿ, ಆಸ್ಪತ್ರೆ ನಿರ್ಮಾಣಕ್ಕೆ, ಅಗತ್ಯವಿರುವ ಎರಡು ಎಕರೆ ಭೂಮಿಯನ್ನೂ ಬಿಡುಗಡೆ ಮಾಡಿಸುವಲ್ಲಿ, ಯಶಸ್ವಿ ಯಾಗಿದ್ದಾರೆ ಎಂದು ಕ್ಷೇತ್ರದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.