ಹಿಂದೊಮ್ಮೆ ಮಂಗಳೂರಿನಲ್ಲಿ ಎಸ್ಡಿಪಿಐ ನಾಯಕರೊಬ್ಬರ ಭಾಷಣದ ತುಣುಕು ಕರಾವಳಿಯಾದ್ಯಂತ ಬಹಳ ಸುದ್ದಿ ಆಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್‌ಗೆ ವಿರುದ್ಧವಾಗಿ ರಿಯಾಜ್ ಪರಂಗಿಪೇಟೆ ತಮ್ಮ ಭಾಷಣದಲ್ಲಿ ‘ತಾಂಟ್ಟ್ರೆ ಬಾ ತಾಂಟ್’ ಎಂಬ ಪದ ಬಳಸಿದ್ದರು. ಇದು ಭಾರೀ ಟ್ರೋಲ್ ಆಗಿತ್ತು. ದೊಡ್ಡ ರೀತಿಯಲ್ಲಿ ಶೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು .
ಸಿನೆಮಾದಲ್ಲೂ ‘ತಾಂಟ್ಟ್ರೆ ಬಾ ತಾಂಟ್’ ಪ್ರತಿಧ್ವನಿ..:
ಇದೀಗ ಬಿಡುಗಡೆಗೆ ಸಿದ್ದವಾಗಿವ ಕೋಸ್ಟಲ್‌ವುಡ್‌ನ ಬಹುನಿರೀಕ್ಷೆಯ ತುಳು ಚಿತ್ರ ‘ಬೋಜರಾಜ್ MBBS’ನಲ್ಲಿ ಹಾಸ್ಯ ನಟ ಅರವಿಂದ್ ಬೋಳಾರ್ ಅವರು, ಬ್ಯಾರಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದುಕೊಂಡು ‘ತಾಂಟ್ಟ್ರೆ ಬಾ ತಾಂಟ್’ ಎಂದು ಅಬ್ಬರಿಸುವ ಡೈಲಾಗ್ ಇದೆಯಂತೆ. ಇದರ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿ ಶೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ಬಗ್ಗೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆಯವರು ತಮ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದು, ಇದು ಈ ಬ್ಯಾರಿ ಭಾಷೆಯಲ್ಲಿ ಬಹುಕಾಲದಿಂದ ಇರುವ ಪದ. ಹುಡುಗರು ಗಲಾಟೆ ಮಾಡುವಾಗ, ಆಟ ಆಡುವಾಗ ಚಾಲೆಂಜ್ ಸಂದರ್ಭದಲ್ಲಿ ಬಳಸುವಂತ ಪದ. ಆ ಡೈಲಾಗ್ ತಮಾಷೆ ರೂಪದಲ್ಲಿ ‘ಭೋಜರಾಜ್…’ ಸಿನಿಮಾದಲ್ಲಿ ಬಳಕೆಯಾಗಿದೆ ಎಂದಿದ್ದಾರೆ.
ನಾವು ನಮ್ಮ ಚಿತ್ರದಲ್ಲಿ ಹಾಸ್ಯ ಸನ್ನಿವೇಶವೊಂದರಲ್ಲಿ ಈ ಪದವನ್ನು ಬಳಸಿದ್ದೇವೆ. ಈಗಾಗಲೇ ಚಿತ್ರದ ಬಿಡುಗಡೆ ಎದುರು ನೋಡುತ್ತಿರುವ ತುಳು ಚಿತ್ರ ಪ್ರೇಕ್ಷಕರಿಗೆ ಈ ಡೈಲಾಗ್ ಚಿತ್ರದ ಬಗ್ಗೆ ಮತ್ತಷ್ಟು ಕೂತೂಹಲವನ್ನು ಹೆಚ್ಚಿಸಿದೆ. ತುಳು ಚಿತ್ರವನ್ನು ಇಲ್ಲಿನ ಸರ್ವ ಧರ್ಮ, ಜಾತಿ ಬಾಂಧವರು ಕೂಡ ಎಂಜಾಯ್ ಮಾಡುವಂತಿದೆ ಎನ್ನುತ್ತಾರೆ ನಿರ್ದೇಶಕರು.