ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಸಾವಿನ ನಿಗೂಢತೆ ತಿಳಿಯಲು ತನಿಖೆಯ ಅಖಾಡಕ್ಕೆ ಧುಮುಕಿರುವ ಬೆಂಗಳೂರು ಪೊಲೀಸರು ಅತುಲ್ ಪತ್ನಿ, ಆತುಲ್ ಅತ್ತೆ, ಹಾಗೂ ಭಾಮೈದನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿರುವ ಮಾರತಹಳ್ಳಿ ಪೊಲೀಸರು ಅತುಲ್ ಪತ್ನಿ ನಿಖಿತಾ ಸಿಂಘಾನಿಯ, ಆತುಲ್ ಅತ್ತೆ, ನಿಶಾ ಸಿಂಘಾನಿಯಾ ಹಾಗೂ ಭಾಮೈದ ಅನುರಾಗ್ ಅವರ ಬಂಧನಕ್ಕೆ ಬಲೇ ಬೀಸಿದ್ದರು. ನಾಪತ್ತೆಯಾಗಿದ್ದ ಆರೋಪಿ ಅತುಲ್ ಪತ್ನಿ ನಿಖಿತಾಳನ್ನು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಲಾಗಿತ್ತು. ಆಕೆ ನೀಡಿದ ಮಾಹಿತಿ ಆಧರಿಸಿ ನಿಶಾ ಸಿಂಘಾನಿಯ ಅನುರಾಗ್ನನ್ನು ಅಲಹಾಬಾದ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.