ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನೌಷಾದ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿದೆ. ನೌಷಾದ್ ಅಲಿಯಾಸ್ ಚೊಟ್ಟೆ ನೌಷಾದ್’ನನ್ನು ಸೋಮವಾರ ಮಂಗಳೂರು ಜೈಲಿಗೆ ಪೊಲೀಸರು ಕರೆದೊಯ್ದ ಸಂದರ್ಭದಲ್ಲಿ ಸಂಜೆ ಇತರ ಕೈದಿಗಳು ಕಲ್ಲು ಸಹಿತ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸೋಮವಾರ ನೌಷಾದ್ ನ ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು. ಹಾಗು ಪೊಲೀಸರು ಆತನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯದ ಆದೇಶದಂತೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಮಂಗಳೂರು ಜೈಲಿನಲ್ಲಿ ಕೈದಿಯೊಬ್ಬನನ್ನು ನೋಡಬೇಕು ಎಂದು ನೌಷಾದ್ ಕೋರಿದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಮಂಗಳೂರು ಜೈಲಿಗೆ ಕರೆದೊಯ್ದಿದ್ದರು ಆತನನ್ನು ನೋಡಿದ ಇತರ ಕೈದಿಗಳು ನೌಷಾದ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕೂಡಲೇ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.




























































