ಬೆಂಗಳೂರು: ಕಬ್ಬಿಗೆ ಸೂಕ್ತ ದರ ನಿಗದಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಬೆಳೆಗಾರರು ಇದೀಗ ‘ಕೊಟ್ಟ ಮಾತಿಗೆ ತಪ್ಪಿರುವ ಸರ್ಕಾರ’ವನ್ನು ಬಡಿದೆಬ್ಬಿಸುವ ಪ್ರಯತ್ನಕ್ಕಿಳಿದಿದ್ದಾರೆ. ನಿನ್ನೆ ಪೊರಕೆಯೊಂದಿಗೆ ಸಿಎಂ ಮನೆಯತ್ತ ಲಗ್ಗೆ ಹಾಕಿ ಸರ್ಕಾರಕ್ಕೆ ಸವಾಲಾಗಿದ್ದ ಕಬ್ಬು ಬೆಳೆಗಾರರು ಇಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಬಳಿ ಕೋಲಾಹಲ ಸೃಷ್ಟಿಸಿದರು.
ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವ ಕಬ್ಬು ಬೆಳೆಗಾರರು ಮೂರನೇ ದಿನವಾದ ಇಂದೂ ಕೂಡಾ ಸತ್ಯಾಗ್ರಹ ಮುಂದುವರಿಸಿದರು.
ಕಬ್ಬಿನ ಎಫ್ಆರ್ಪಿ ಹೆಚ್ಚುವರಿ ದರ ನಿಗದಿ ಒತ್ತಾಯಿಸಿ ಕಬ್ಬು ಬೆಳೆಗಾರ ರೈತರು ಪ್ರಿಡಂ ಪಾರ್ಕ್ನಲಿ, 3ನೇ ದಿನ ಉರುಳು ಸೇವೆ ಆರಂಭಿಸಿ ವಿದಾನ ಸೌದಧ ಕಡೆಗೆ ಉರುಳುತ್ತಾ ಹೋಗುತ್ತಿದ್ದಾಗ ರಸ್ತೆ ಮಧ್ಯದಲ್ಲಿ ತಡೆದ ಪೊಲೀಸರು ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು, ಆರ್ಬಿಐ ಮುಖ್ಯಸ್ಥರನ್ನು ಕರೆಸಿ ಕೃಷಿ ಸಾಲದ ಸಮಸ್ಯೆಗಳ, ಹಾಗೂ ಕಂದಾಯ ಇಲಾಖೆ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು
ಕೇಂದ್ರ ಸರ್ಕಾರ ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚುತಿದೆ, ಕಬ್ಬು ದರ ಏರಿಕೆ ಮಾಡಿದ್ದೇವೆ ಎನ್ನುತ್ತಲೇ ಕಳೆದ ನಾಲ್ಕು ವರ್ಷಗಳಿಂದ ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು 8.5 ರಿಂದ 10.25ಕ್ಕೆ ಏರಿಕೆ ಮಾಡಿದೆ. ಇದರಿಂದ ಕಬ್ಬುಬೆಲೆ ಏರಿಕೆ ಮಾಡಲಾಗಿದೆ ಎನ್ನುತ್ತಿದ್ದರು. ರೈತರಿಗೆ ಹೆಚ್ಚುವರಿ ಬೆಲೆ ಸಿಗುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ಮಾತ್ರ ಕಟಾವು ಸಾಗಾಣಿಕೆ ವೆಚ್ಚವನ್ನು ಏರಿಕೆ ಮಾಡುತ್ತಾ ರೈತರನ್ನು ನಷ್ಟ ಸಂಕಷ್ಟಕ್ಕೆ ದುಡುತ್ತಿದ್ದಾರೆ. ಇದರಿಂದ ರೈತರಿಗೆ ನೂರಾರು ಕೋಟಿ ರೂಪಾಯಿ ಮೋಸವಾಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರದ ಸಕ್ಕರೆ ನಿಯಂತ್ರಣ ಕಾಯ್ದೆ 1966 ಪ್ರಕಾರ ಕಬ್ಬು ಪೂರೈಕೆ ಮಾಡಿದ ರೈತನಿಗೆ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದೆ. ವಿಳಂಬವಾದರೆ ಶೇ 15 ಬಡ್ಡಿ ಸೇರಿಸಿ ರೈತರಿಗೆ ಪಾವತಿಸಬೇಕು ಎನ್ನುವ ಕಾನೂನು ಇದ್ದರೂ ಕಾರ್ಖಾನೆಗಳು ಎರಡು ಮೂರು ತಿಂಗಳ ತನಕ ಹಣ ಪಾವತಿಸುತ್ತಿದ್ದಾರೆ ಯಾಕೆ ಸರ್ಕಾರ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೋವು ಹೊರಹಾಕಿದರು.
ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಹಣ ಬಾಕಿ ಇಲ್ಲ ಎನ್ನುತ್ತಾರೆ ಆದರೆ ರೈತರು ಹೇಳುತ್ತಿರುವುದು ಸುಳ್ಳೇ, ಸರ್ಕಾರದ ಪ್ರತಿನಿಧಿ, ಕಾರ್ಖಾನೆ ಪ್ರತಿನಿಧಿ, ಕಬ್ಬು ಬೆಳೆಗಾರ ಸಂಘದ ಪ್ರತಿನಿಧಿ ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ಶ್ವೇತ ಪತ್ರ ಹೊರಡಿಸಲಿ ಆಗ ರಾಜ್ಯದ ಜನರಿಗೆ ಕಾರ್ಖಾನೆಗಳು ನಡೆಸುವ ವಂಚನೆ ತಿಳಿಯಲಿ ಎಂದ ರೈತರು, ದೇಶದ ಜನರಿಗೆ ಕಬ್ಬು ಬೆಳೆದು ಸಿಹಿ ನೀಡುವ ರೈತ, ರಸ್ತೆಯಲ್ಲಿ ಮಳೆ ಚಳಿಯಲ್ಲಿ ಮಲಗಿ ಕಹಿ ಅನುಭವಿಸಬೇಕೆ ಎಂದು ಪ್ರಶ್ನಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಪ್ರಜಾ ಸರ್ಕಾರಕ್ಕೆ ಶೋಭೆ ತರುತ್ತದೆಯೆ ಎಂದು ಚಳುವಳಿ ಜಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕುಗಳು ರೈತರನ್ನು ಬಿಕ್ಷುಕರಂತೆ ಕಾಣುತ್ತಿವೆ. ಕಾನೂನು ನಿಯಮಗಳನ್ನು ಉಲ್ಲಂಗಿಸುತ್ತಿದ್ದಾರೆ ಎಂದು 5 ತಿಂಗಳ ಹಿಂದೆ ಬೆಂಗಳೂರು ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿ ನಡೆಸಿ ಗಮನ ಸೆಳೆದರೂ,ಆರ್ಬಿಐ ಮುಖ್ಯಸ್ಥರು ಸಮಸ್ಯೆ ಬಗೆಹರಿಸದೇ ಇದ್ದ ಕಾರಣ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ, ಇದಕ್ಕೆ ಆರ್ಬಿಐ ನಿರ್ಲಕ್ಷ ನೀತಿ ಕಾರಣವಲ್ಲವೇ ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.
ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರವನ್ನು ನೀಡದೆ ಸಾಗುವಳಿ ಪತ್ರ ನೀಡದೆ, ಮುಗ್ಧ ಅಮಾಯಕ ಲಕ್ಷಾಂತರ ರೈತರ ಕೃಷಿಯಿಂದ ಒಕ್ಕಲಿಬಿಸುವ ಕಾರ್ಯ ನಡೆದಿದೆ. ಇದರಿಂದಾಗಿ ರೈತರು ಬೀದಿ ಪಾಲಾಗುತ್ತಿದ್ದಾರೆ. ಇದು ಕಂದಾಯ ಸಚಿವ ಅಶೋಕ್ರವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಗ್ರಾಮ ವಾಸ್ತವ್ಯ ಎಂದು ನಾಟಕವಾಡುವುದು ಏಕೆ? ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರಿಗೆ ನ್ಯಾಯನೀಡುತ್ತಿಲ್ಲವೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ರಾಜ್ಯ ಸರ್ಕಾರ ನಿರ್ಧಾರ ನ್ಯಾಯ ನೀಡುವ ತನಕ ಹೋರಾಟ ನಿಲ್ಲದು ಎಂದವರು ಹೇಳಿದರು. ಇಂದಿನ ಚಳುವಳಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ್ ಮಲ್ಲನಗೌಡ ಪಾಟೀಲ್, ಕುಮಾರ ಭೂಬಾಟಿ, ಉಳುವಪ್ಪ ಬೆಳಗೇರಿ, ಬಸವನಗೌಡರು, ಗುಲ್ಬರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಉಗಾರ್, ಬಸವರಾಜ್ ಪಾಟೀಲ್, ಎಂ ವಿ ಗಾಡಿ, ಅತ್ತಹಳ್ಳಿದೇವರಾಜ್,
ಬರಡನಪುರ ನಾಗರಾಜು ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.














































































ಕಬ್ಬಿನ ಎಫ್ಆರ್ಪಿ ಹೆಚ್ಚುವರಿ ದರ ನಿಗದಿ ಒತ್ತಾಯಿಸಿ ಕಬ್ಬು ಬೆಳೆಗಾರ ರೈತರು ಪ್ರಿಡಂ ಪಾರ್ಕ್ನಲಿ, 3ನೇ ದಿನ ಉರುಳು ಸೇವೆ ಆರಂಭಿಸಿ ವಿದಾನ ಸೌದಧ ಕಡೆಗೆ ಉರುಳುತ್ತಾ ಹೋಗುತ್ತಿದ್ದಾಗ ರಸ್ತೆ ಮಧ್ಯದಲ್ಲಿ ತಡೆದ ಪೊಲೀಸರು ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು, ಆರ್ಬಿಐ ಮುಖ್ಯಸ್ಥರನ್ನು ಕರೆಸಿ ಕೃಷಿ ಸಾಲದ ಸಮಸ್ಯೆಗಳ, ಹಾಗೂ ಕಂದಾಯ ಇಲಾಖೆ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು