ಬೆಂಗಳೂರು: ಕಬ್ಬುಗೆ ನ್ಯಾಯಯುತ ಬೆಲೆ ನಿಗದಿಪಡಿಸಲು ಒತ್ತಾಯಿಸಿ ಬೆಳಗಾರರು ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ. ರೈತಪರ ಸರ್ಕಾರ ಎನ್ನುತ್ತಿರುವ ಸರ್ಕಾರ ರೈತರನ್ನು ಬೀದಿಯಲ್ಲಿ ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ಸಿಎಂ ಅವರು ಭೇಟಿಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರ ಸಂಘದ ರೈತರ ಅಹೋರಾತ್ರಿ ಧರಣಿ ಇಂದು 12ನೇ ದಿದಲ್ಲಿ ಮುಂದುವರಿದಿದೆ. ನಿನ್ನೆ, ಧರಣಿ ನಿರತರು ‘ನ್ಯಾಯ ಕೊಡಿ, ಇಲ್ಲವೇ ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ’ ಎಂದು ಚಳುವಳಿ ನಡೆಸಿ ಬಂಧನಕ್ಕೊಳಗಾಗಿದ್ದರು. ಈ ಹೋರಾಟನಿರತರನ್ನು ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿನ ಬೇರೆ ಬೇರೆ ಕಡೆ ಹಿಡಿದಿಟ್ಟುಕೊಂಡಿದ್ದರು.
ಕಬ್ಬು ಎಫ್ ಆರ್ ಪಿ ದರ ರೈತರಿಗೆ ಮೋಸ, ರಾಜ್ಯ ಸಲಹಾ ಬೆಲೆ ನಿಗದಿ ಮಾಡಿ ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ, ಎಂದರೆ ಪೊಲೀಸರು ಮುಖ್ಯಮಂತ್ರಿ ಮನೆ ಬಳಿ ಹೋಗಲು ಬಿಡುತ್ತಿಲ್ಲ, ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ಎಂದು ಘೋಷಣೆ ಕೂಗುತ್ತಾ ಸಿಎಂ ಮನೆ ಕಡೆ ಹೊರಟ ರೈತರನ್ನು ರೈತ ಮಹಿಳೆಯರನ್ನ ಪೊಲೀಸರು ತಡೆದು ಬಂಧಿಸಿದ್ದರು.
ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿರುವ ಕುರುಬೂರು ಶಾಂತಕುಮಾರ್, ಸುಮ್ಮಸುಮ್ಮನೆ ಮುಂಜಾಗ್ರತ ಕ್ರಮ ಬಂಧನ ಬೇಡ, ನ್ಯಾಯ ಕೊಡಿಸಿ ಇಲ್ಲವೇ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ನಿಮಗೆ ಸಾಧ್ಯವಾದರೆ ಮಾತ್ರ ನಮ್ಮನ್ನು ಬಂಧಿಸಿ, ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು, ನಾವು ಮುಖ್ಯಮಂತ್ರಿ ಮನೆಗೆ ಹೋಗಲು ಬಿಡುತ್ತಿಲ್ಲ, ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯುತ್ತಿಲ್ಲ, ಇದು ಗುಂಡಾಗಿರಿ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಚಿವರ, ಸಂಸದರ ಮನೆಗಳಿಗೆ ಲಗ್ಗೆ:
ರೈತ ಮಹಿಳೆಯರನ್ನು ಮುಖ್ಯಮಂತ್ರಿ ಮನೆಯತ್ತ ಹೋಗಲು ಯತ್ನಿಸಿದಾಗ ಬಂಧಿಸಲಾಯಿತು, ರಾಜ್ಯ ಸರ್ಕಾರ ಜೇಡರ ಬಲೆಯಲ್ಲಿ ಸಿಲುಕಿದೆ ರೈತರನ್ನು ಈ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ, ಕಳೆದ ನಾಲ್ಕು ತಿಂಗಳಿಂದ ಮಂಡ್ಯ ಬಿಜಾಪುರ ಮೈಸೂರು ಜಿಲ್ಲೆಗಳಲ್ಲಿ ನಿರಂತರ ಧರಣಿ ಚಳುವಳಿ ನಡೆಸುತ್ತಿದ್ದರು, ಮಂತ್ರಿಗಳು ಸುಳ್ಳು ಹೇಳಿಕೊಂಡು ರಾಜಭಾರ ಮಾಡುತ್ತಿದ್ದಾರೆ, ಸಕ್ಕರೆ ಸಚಿವರು ಪಾಪದ ಕೂಸಾಗಿ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ಬಿಜೆಪಿ ಶಾಸಕರು, ಸಂಸದರ ಮನೆ ಅಥವಾ ಕಚೇರಿ ಮುಂದೆ ರಾಜ್ಯಾದ್ಯಂತ ಐದರಂದು ಸೋಮವಾರ ಪ್ರತಿಭಟನೆ ಮಾಡುವಂತೆ ರೈತರಿಗೆ ಅವರು ಕರೆ ನೀಡಿದ್ದಾರೆ.
ಸರ್ಕಾರಕ್ಕೆ ಕುರುಬೂರು ಸಂದೇಶ..
-
ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಏನು ಮಾಡಿದ್ದಾರೆ, ರೈತರಿಗೆ ಬಹಿರಂಗಪಡಿಸಲಿ
-
ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ಹುಸಿಗೊಳಿಸುತ್ತಿದ್ದಾರೆ ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎನ್ನುವಂತಾಗಿದೆ. ಇಂತಹಾ ಸುಳ್ಳು ಭರವಸೆ ನೀಡಬೇಡಿ.
-
ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರು ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ, ಪೂಲಿಸರ್ ಬಲ ಪ್ರಯೋಗವನ್ನು ನಿಲ್ಲಿಸಿ.
-
ಮುಖ್ಯಮಂತ್ರಿಯವರು ಜನಸಂಪರ್ಕ ಸಭೆ ಮಾಡುತ್ತಿದ್ದಾರೆ ಯಾವ ಸಾಧನೆಗಾಗಿ ನಿಮ್ಮ ಕಚೇರಿ ಹತ್ರ ಕುಳಿತಿರುವ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗಿದಿರಿ, ಕೂಡಲೇ ರೈತಪರ ನಿರ್ಧಾರ ಕೈಗೊಳ್ಳಲಿ.






















































ಸರ್ಕಾರಕ್ಕೆ ಕುರುಬೂರು ಸಂದೇಶ..