ಬೆಂಗಳೂರು: ದೇಶದೆಲ್ಲೆಡೆ ಸದ್ದು ಮಾಡಿರುವ ‘ಕಾಂತಾರ’ ಸಿನಿ ತಂಡಕ್ಕೆ ಕಾನೂನು ಹೋರಾಟದಲ್ಲಿ ಜಯಸಿಕ್ಕಿದೆ. “ವರಾಹ ರೂಪಂ’ ಹಾಡಿನ ಕುರಿತಂತೆ ಎದ್ದಿದ್ದ ವಿವಾದ ಇದೀಗ ಬಗೆಹರಿದಿದ್ದು ಒಟಿಟಿ ಸೇರಿದಂತೆ ‘ಕಾಂತಾರ’ ಚಿತ್ರ ಪರಿಪೂರ್ಣ ರೂಪದಲ್ಲಿ ವೀಕ್ಷಣೆಗೆ ಲಬ್ಯವಾಗಲಿದೆ.
“ವರಾಹ ರೂಪಂ’ ಹಾಡು ಕುರಿತು ಕೇರಳದ ಮ್ಯೂಸಿಕ್ ಬ್ಯಾಂಡ್ ಥೈಕುಡಂ ಬ್ರಿಡ್ಜ್ ತಕಾರಾರು ಎತ್ತಿದ್ದು, ಕಾನೂನು ಸಮರ ಕೈಗೊಂಡಿತ್ತಿ, ಈ ಕಾನೂನು ಹೋರಾಟ ಕೇರಳ ಹೈಕೋರ್ಟ್ ವರೆಗೂ ತಲುಪಿ ‘ಕಾಂತಾರ’ ಸಿನಿತಂಡದ ಪ್ರಮುಖರಿಗೆ ಕೋರ್ಟ್ ನೊಟೀಸ್ ಹೊರಡಿಸಿತ್ತು.
ಇದೀಗ ಅಚ್ಚರಿಯ ತೀರ್ಮಾನವೊಂದರಲ್ಲಿ ‘ಕಾಂತಾರ’ ಕುರಿತಂತೆ ಇದ್ದ ವಿವಾದ ಬಗೆಹರಿದಿದೆ. ಈ ಕುರಿತಂತೆ ನಟ ರಿಷಬ್ ಶೆಟ್ಟಿ ಕೂಡಾ ಮಾಹಿತಿ ಹಂಚಿಕೊಂಡಿದ್ದಾರೆ. ‘ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ’ ಎಂದಿದ್ದಾರೆ.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022





















































