ಭಟ್ಕಳ: ಆರೋಗ್ಯ ಸಚಿವ ಡಾ. ಸುಧಾಕರ್ ಸಕಲ ಕಲಾ ವಲ್ಲಭ ಎನ್ನುವುದರಲ್ಲಿ ಎರಡು ಮಾತಿಲ್ಲ.. ರಾಜಕೀಯ ಕ್ಷೇತ್ರ ಮಾತ್ರವಲ್ಲ, ವೈದ್ಯಕೀಯ ಕ್ಷೇತ್ರದಲ್ಲೂ ಅವರದ್ದು ಮುಂಚೂಣಿ ಶ್ರಮ. ಇದೀಗ ಅವರು ಯಕ್ಷಗಾನ ಪಟುವಾಗಿ ಗಮನಸೆಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಂಗಳವಾರ ಸಚಿವ ಡಾ.ಸುಧಾಕರ್ ಅವರು ಯಕ್ಷಗಾನ ಕಲಾವಿದನಾಗಿ ಬಣ್ಣ ಹಚ್ಚಿ ಗಮನಸೆಳೆದರು. ಭಟ್ಕಳದಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮದ ಬಳಿಕ ಅವರು ಶಾಸಕ ಸುನಿಲ್ ನಾಯಕ್ ಅವರ ಮನೆಗೆ ತೆರಳಿದರು. ಅಲ್ಲೇ ಒಂದಷ್ಟು ಹೊತ್ತು ಯಕ್ಷಗಾನ ವೀಕ್ಷಿಸಿದರು. ಯಕ್ಷಗಾನದ ಕಲೆ, ನೃತ್ಯ ವೈಭವಕ್ಕೆ ಮನಸೋತ ಸಚಿವರು, ತಾವೂ ಬಣ್ಣ ಹಚ್ಚಿ ಕಲಾವಿದನಾಗಿ ವೇದಿಕೆ ಹತ್ತಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಈ ಕುರಿತಂತೆ ಸಂತಸ ಹಂಚಿಕೊಂಡ ಸಚಿವ ಸುಧಾಕರ್, ಯಕ್ಷಗಾನವು ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು. ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ ಎಂದಿದ್ದಾರೆ. ಮಂಗಳವಾರ ರಾತ್ರಿ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ ಎಂದು ಸುಧಾಕರ್ ಹೇಳಿಕೊಂಡಿದ್ದಾರೆ.
ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ.
ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ. ನೆನ್ನೆ ರಾತ್ರಿ ಭಟ್ಕಳ ಶಾಸಕ ಶ್ರೀ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ. pic.twitter.com/I9AtP2GT4u
— Dr Sudhakar K (Modi ka Parivar) (@DrSudhakar_) October 12, 2022
























































