ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೀಗ ಅಧಿಕಾರ ದುರುಪಯೋಗದ ಆರೋಪಕ್ಕೆ ಗುರಿಯಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರವಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಬೆಡ್ ಮೀಸಲಿಡಬೇಕೆಂದು ಆದೇಶಿಸಿರುವ ಬೆಳವಣಿಗೆ ಇದೀಗ ವಿವಾದದ ಸ್ವರೂಪ ತಾಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ನೆಟ್ಟಿಗರು ಸಚಿವ ಸುಧಾಕರ್ ಹಾಗೂ ರಾಜ್ಯ ಸರ್ಕಾರವನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಸಚಿವ ಸುಧಾಕರ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
ಏನಿದು ವಿವಾದ..?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ, ಬ್ಯಾಪ್ಟಿಸ್ಟ್ ಹಾಗೂ ಸಹಕಾರ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಗಳಲ್ಲಿ ಶೇ.15% ಹಾಸಿಗೆಗಳನ್ನು ಜಿಲ್ಲೆಯಿಂದ ಸರ್ಕಾರಿ ಕೋಟಾದಡಿಯಲ್ಲಿ ಶಿಫಾರಸ್ಸು ಮಾಡಲ್ಪಡುವ ಸೋಂಕಿತರಿಗೆ ಮೀಸಲಿಡಬೇಕೆಂದು ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಆದೇಶ ಪ್ರತಿಗಳೊಂದಿಗೆ ಟ್ವೀಟ್ ಮಾಡಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ, ಬ್ಯಾಪ್ಟಿಸ್ಟ್ ಹಾಗೂ ಸಹಕಾರ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಗಳಲ್ಲಿ ಶೇ.15% ಹಾಸಿಗೆಗಳನ್ನು ಜಿಲ್ಲೆಯಿಂದ ಸರ್ಕಾರಿ ಕೋಟಾದಡಿಯಲ್ಲಿ ಶಿಫಾರಸ್ಸು ಮಾಡಲ್ಪಡುವ ಸೋಂಕಿತರಿಗೆ ಮೀಸಲಿಡಬೇಕೆಂದು ಆದೇಶಿಸಲಾಗಿದೆ. pic.twitter.com/6EyQnT0t1l
— Dr Sudhakar K (Modi ka Parivar) (@DrSudhakar_) April 30, 2021
ರಾಜಧಾನಿ ಸುತ್ತಮುತ್ತ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಸಹಿತ ಹಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿದ್ದರೂ ಆರೋಗ್ಯ ಸಚಿವರು ತಮ್ಮ ಜಿಲ್ಲೆಯ ಬಗ್ಗೆ ಮಾತ್ರ ಗಮನ ಹರಿಸಿರುವುದು ಸರಿಯೇ ಎಂಬ ಪ್ರಶ್ನೆಗೆ ಅವರ ಈ ನಡೆ ಕಾರಣವಾಗಿದೆ. ಸಚಿವರ ಈ ಟ್ವೀಟ್ ಬಗ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಅಸಂಖ್ಯ ಮಂದಿ ಸಚಿವರ ಟ್ವೀಟ್‌ಗೆ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಲವರು ಸಚಿವ ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ನೀವು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಆರೋಗ್ಯ ಸಚಿವರಲ್ಲ ಇಡೀ ರಾಜ್ಯಕ್ಕೆ. ನಿಮ್ಮ ಕ್ಷೇತ್ರದ ಜನತೆ ಬಗ್ಗೆ ಅಷ್ಟು ಕಾಳಜಿ ಇದ್ದರೆ, ಕ್ಷೇತ್ರದಲ್ಲಿ ಇರುವ ಆಸ್ಪತ್ರೆಯ ಕುಂದು ಕೊರತೆ ನೀಗಿಸಿ ಉತ್ತಮ ಸೌಲಭ್ಯ ಒದಗಿಸಿ ಶೀಘ್ರವೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ. ಅದನ್ನು ಬಿಟ್ಟು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ ಎಂದೂ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಆರೋಗ್ಯ ಸಚಿವರಲ್ಲ ಇಡೀ ರಾಜ್ಯಕ್ಕೆ. ನಿಮ್ಮ ಕ್ಷೇತ್ರದ ಜನತೆ ಬಗ್ಗೆ ಅಷ್ಟು ಕಾಳಜಿ ಇದ್ದರೆ, ಕ್ಷೇತ್ರದಲ್ಲಿ ಇರುವ ಆಸ್ಪತ್ರೆಯ ಕುಂದು ಕೊರತೆ ನೀಗಿಸಿ ಉತ್ತಮ ಸೌಲಭ್ಯ ಒದಗಿಸಿ ಶೀಘ್ರವೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ. ಅದನ್ನು ಬಿಟ್ಟು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ. @DHFWKA
— Prathap Shetty (@shettyprathapp) April 30, 2021