ದೆಹಲಿ: ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣ ಅನೇಕಾನೇಕ ತಿರುವುಗಳನ್ನು ಪಡೆಯುತ್ತಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಮಾತುಗಳೂ ಹರಿದಾಡುತ್ತಿವೆ. ಈ ಸಂದರ್ಭದಲ್ಲೇ ಸುಶಾಂತ್ ಆತ್ಮ ಜೊತೆಗಿನ ಸಂವಾದದ ವಿಚಾರ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
ಸತ್ತವರ ಆತ್ಮದ ಜೊತೆ ಮಾತನಾಡಲು ಸಾಧ್ಯವೇ? ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಮೂಡುತ್ತವೆ. ಸಿನಿಮಾಗಳಲ್ಲಿ ಇಂತಹಾ ಸನ್ನಿವೇಶ ಸೃಷ್ಟಿಸಲಾಗುತ್ತಿದ್ದರೆ, ಅತ್ತ ಸಾಗರೋತ್ತರ ದೇಶದಿಂದ ಸುಶಾಂತ್ ಸಿಂಗ್ ಆತ್ಮದ ಜೊತೆಗಿನ ಸಂವಾದದ ಸುದ್ದಿ ಪ್ರತಿಧ್ವನಿಸಿದೆ. ಅತೀಂದ್ರಿಯ ತಜ್ಞ ಎಂದೇ ಖ್ಯಾತಿಯಾಗಿರುವ ಪ್ಯಾರಾನಾರ್ಮಲ್ ತಜ್ಞ ಸ್ವೀವ್ ಹಫ್ ತನ್ನ ಅಪ್ರತಿಮ ಪ್ರತಿಭೆ ಮೂಲಕ ನಟ ಸುಶಾಂತ್ ಸಿಂಗ್ ಆತ್ಮದ ಜೊತೆ ಮಾತನಾಡಿದರಂತೆ.
ಈ ಹಿಂದೆ ಮೈಕಲ್ ಜಾಕ್ಸನ್ ಆತ್ಮದ ಜೊತೆ ಸಂವಾದ ನಡೆಸಿದ್ದಾಗಿ ಹೇಳಿಕೊಂಡಿದ್ದ ಸ್ವೀವ್ ಹಫ್ ಜಗತ್ತಿನಾದ್ಯಂತ ಕುತೂಹಲಕಾರಿ ಚರ್ಚ್ಗೆ ಸಾಕ್ಷಿಯಾಗಿದ್ದರು. ಇದೀಗ ಸುಶಾಂತ್ ಆತ್ಮದ ಜೊತೆಗೂ ಮಾತನಾಡಿ ಸಾವಿನ ನಿಗೂಢತೆಯನ್ನು ಬೇಧಿಸುವಂತೆ ಅನೇಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ತಾವು ಪ್ರಯತ್ನ ಮಾಡಿದ್ದಾಗಿ ತಜ್ಞ ಸ್ವೀವ್ ಹಫ್ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಟೀವ್ ಆ ಆತ್ಮವನ್ನು ‘ಸಾಯುವ ಹಿಂದಿನ ದಿನದ ರಾತ್ರಿ ಏನಾಗಿತ್ತು ಹೇಳಿ’ ಎಂದು ಕೇಳಿದಾಗ ಸುಶಾಂತ್ ಆತ್ಮ ‘ಗಂಡಸರ ಜೊತೆ ಜಗಳ ನಡೆಯಿತು’ ಎಂದು ಉತ್ತರ ನೀಡಿದೆಯಂತೆ. ‘ನಿಮ್ಮನ್ನು ಯಾರಾದ್ರೂ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾರಾ? ಎಂದು ಕೇಳಿದಾಗ ‘ಅವರು ಮೊಳೆ ತೆಗೆದುಕೊಂಡು ಬಂದಿದ್ದರು’ ಎಂದು ಆತ್ಮ ಉತ್ತರಿಸಿದೆಯಂತೆ.
ಈ ಸಂವಾದದ ಸಂದರ್ಭದಲ್ಲಿ ತಾವದನ್ನು ರೆಕಾರ್ಡ್ ಮಾಡಿರುವುದಾಗಿ ಹೇಳಿಕೊಂಡಿರುವ ಸ್ವೀವ್ ಹಫ್, ಈ ಕುರಿತ ಕಥಾನಕವನ್ನು ತಮ್ಮ ಯು ಟ್ಯೂಬ್ ಚಾನೆಲ್’ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಆತ್ಮದೊಂದಿಗೆ ಸಂವಾದ ಸಾಧ್ಯವೋ ಅಸಾಧ್ಯವೋ ಎಂಬುದನ್ನು ಸ್ಪಷ್ಟವಾಗಿ ಹೇಳಿದವರಿಲ್ಲ. ಆತ್ಮದ ಜೊತೆಗಿನ ಈ ವಿಚಾರ ವಿನಿಮಯವೂ ಕೂಡ ಸತ್ಯವೋ ಮಿಥ್ಯವೋ ಗೊತ್ತಿಲ್ಲ. ಆದರೆ ಸ್ವೀವ್ ಹಫ್ ಈ ವಿಚಾರವನ್ನು ಹರಿಯಬಿಡುವ ಮೂಲಕ ಇದೀಗ ಎಲ್ಲರ ಗಮನವನ್ನು ಈ ಬೆಳವಣಿಗೆಯತ್ತ ಕೇಂದ್ರೀಕರಿಸುವಂತೆ ಮಾಡಿದ್ದಾರೆ.