ಬೆಂಗಳೂರು: ಕೊರೋನಾ ವೈರಾಣು ಹಾವಳಿಯಿಂದಾಗಿ ಜನ ಜೇವನ ತತ್ತರಗೊಂಡಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ವ್ಯವಸ್ಥೆಗೆ ಹೊಡೆತ ನೀಡುತ್ತಿದೆ.
ಬೆಂಗಳೂರಿನಲ್ಲಿ ನಡೆದ ಪ್ರಸಂಗವೊಂದು ಕೊರೋನಾ ವಾರಿಯರ್ಸ್’ಗಳು ಇಂತಹಾ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕೊರೋನಾ ಸೋಂಕಿತರನ್ನು ಕರೆದೊಯ್ಯುವ ವಾಹನ ಚಾಲಕನೊಬ್ಬ ತನ್ನ ಸುರಕ್ಷತೆಯ ಆವಶ್ಯಕತೆ ಬಗ್ಗೆ ಮನವರಿಕೆ ಮಾಡಿದಾಗ ಬಿಬಿಎಂಪಿ ಸಿಬ್ಬಂದಿಯೆನ್ನಲಾದ ವ್ಯಕ್ತಿಯೊಬ್ಬರು ವರ್ತಿಸಿದ ಈ ವೀಡಿಯೋ ವ್ಯವಸ್ಥೆಯನ್ನು ಅನಾವರಣಮಾಡಿದೆ.
ಈ ವೀಡಿಯೊವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ನಮ್ಮ ಚಾಲಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನಾ ಪೇಷಂಟ್ ನ ಕರ್ಕೊಂಡು ಹೋಗಿ ಡ್ರಾಪ್ ಮಾಡಿ ಬಂದಮೇಲೆ ಸ್ನಾನದ ವ್ಯವಸ್ಥೆ ಕೊಡಿ ಅಂದಿದ್ದಕ್ಕೆ ಬಿಬಿಎಂಪಿ ಅವರು ಯಾವ್ತರ ಉತ್ತರ ಕೊಡುತ್ತಿದ್ದಾರೆ ನೋಡಿ ಫ್ರೆಂಡ್ಸ್’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಈ ವೀಡಿಯೋ ಬಗ್ಗೆ ಸಾರ್ವಜನಿಕರಿಂದ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಬಿಎಂಪಿ ಅಧಕಾರಿಗಳಿಗೆ ಇರುವ ದುರಹಂಕಾರ ಕಮ್ಮಿ ಇಲ್ಲ, ಚನ್ನಾಗಿ ತಿಂದು ತಿಂದು ಗೂಳಿ ತರ ಕೊಬ್ಬಿದ್ದವೆ. ಯಾರು ಭಯವೂ ಇಲ್ಲ’ ಎಂದು ಕೆಲವರು ಹೇಳಿಕೊಂಡಿದ್ದಾರೆ.
ಮತ್ತೊಬ್ಬ ಪ್ರಜ್ಞಾವಂತ ಪ್ರತಿಕ್ರಿಯೆ ನೀಡಿ, ‘ಅಧಿಕಾರ ಅಂದ್ರೆ ಏನು ? ಸರ್ವಾಧಿಕಾರವೇ? ದರ್ಪ ತೋರಿಸೋಕಾ? ಹೇಳುವುದನ್ನು ಸೌಮ್ಯವಾಗಿ ಹೇಳಿದರೆ ಅವರ ಅಧಿಕಾರ ಹೊರಟು ಹೋಗತ್ತಾ? ಅಥವಾ ಮರ್ಯಾದೆ ಕಡಿಮೆ ಆಗತ್ತಾ? ಇದಕ್ಕೆ ಅಧಿಕಾರ ಅನ್ನಲ್ಲ, ಉದ್ಧಟತನ, ದುರಂಹಕಾರ ಅನ್ನುತ್ತಾರೆ. ಎಲ್ಲದಕ್ಕೂ ಸಮಯ ಸಂದರ್ಭ ನೋಡಿ ವರ್ತಿಸಬೇಕು. ಮಿತಿ ಇರುತ್ತೆ. ಇವರ ಮೇಲಧಿಕಾರಿಗಳು ದಯವಿಟ್ಟು ಕ್ರಮ ಜರುಗಿಸಿ’ ಎಂದು ಅಭಿಪ್ರಾಯ, ಆಕ್ರೋಶ, ಆಗ್ರಹಗಳನ್ನು ಮುಂದಿಟ್ಟಿದ್ದಾರೆ.
ಇನ್ನೊಬ್ಬರು, ‘BSY ಏನು ಮಾಡುತ್ತಿದ್ದೀರಿ ಇವೆಲ್ಲ ನಿಮಗೆ ಕಾಣಿಸುತ್ತ ಅಥವಾ ಸಿಎಂ ಅಂತ ಬೋರ್ಡ್ ಹಾಕಿಕೊಂಡು ಮನೆಗೆ ಮಲ್ಗಿದ್ದಿರ. ಛೇ ನಾಚಿಕೆಯಾಗಬೇಕು…’ ಎಂದು ಮುಖ್ಯಮಂತ್ರಿಯವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂತಹಾ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ ಎಂದೂ ಹಲವಾರು ಒತ್ತಾಯಿಸಿದ್ದಾರೆ.