ಗದಗ: ಮೊರೋನಾ ಸೋಙಕು ತಡೆಯಲುವ ಸಂಬಂಧ ರಾಜ್ಯ ಸರ್ಕಾರ ಜಾರಿಗೊಳಿಸಿದ ವಾರಾಂತ್ಯದ ಕರ್ಫ್ಯೂ ಯಶಸ್ಸಿಗೆ ಪೊಲೀಸರು ಹರಸಾಹಸಪಟ್ಟರು. ಬೆಂಗಳೂರು ಮಾತ್ರವಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪೊಲೀಸರು ಅಖಾಡಕ್ಕಿಳಿದಿದ್ದರು.
ಬೇಕಾ ಬಿಟ್ಟಿಯಾಗಿ ವಾಹನದಲ್ಲಿ ತೆರಳುತ್ತಿರುವವರಿಗೆ ಪೊಲೀಸರು ಭಾರೀ ದಂಡ ವಿಧಿಸುತ್ತಿದ್ದರು. ಹಲವರ ವಾಹನಗಳನ್ನ ವಶಕ್ಕೆ ಪಡೆದುಕೊಂಡರು. ಗದಗ್ ನಗರದಲ್ಲೂ ಈ ರೀತಿಯ ಕಾರ್ಯಾಚರಣೆ ಕಂಡುಬಂತು.
ಬೆಳಗ್ಗೆ 10 ಗಂಟೆಯ ಬಳಿಕ ಕರ್ಪ್ಯೂ ಅಖಾಡಕ್ಕೀಳಿದ ಪೋಲಿಸರು ಕರ್ಪ್ಯೂ ಮಧ್ಯೆ ಅನಗತ್ಯ ಓಡಾಡುವ ಜನರಿಗ ಸಖತ್ ಬಿಸಿ ಮುಟಿಸುತ್ತಿದ್ದರು. ವಿನಾಕಾರಣ ಬೈಕ್ ನಲ್ಲಿ ಓಡಾಡುವ ಜನ್ರ ಬೈಕ್ ಸೀಸ್ ಮಾಡುವ ಮೂಲಕ ಕರ್ಫ್ಯೂ ಬಿಸಿ ತೋರಿಸಿದ್ದಾರೆ.
ನಗರದ ಹಳೇ ಡಿಸಿ ಕಚೇರಿ ಸರ್ಕಲ್, ರೋಟರಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಹಲವು ಬೈಕ್ ಗಳು ಸೀಜ್ ಮಾಡಿದ್ದಾರೆ.