ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕಾರ ವಿಚಾರದಲ್ಲಿನ ನಿಜ ಸಂಗತಿ ಏನು..? ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ. ನಾರಾಯಣ ಗುರುಗಳ ಬಗ್ಗೆ ಮೋದಿ ಅವರ ನಿಲುವು ಎಂಥದ್ದು ಎಂಬುದನ್ನು ವೀಡಿಯೋ ಸಹಿತ ಜನತೆಗೆ ಮನದಟ್ಟು ಮಾಡಿದ್ದಾರೆ..
ಬೆಂಗಳೂರು: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕಾರ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಮೋದಿ ಸರ್ಕಾರದತ್ತ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿನ ನಿಜ ಸಂಗತಿ ಏನು ಎಂಬುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ನಾರಾಯಣಗುರುಗಳ ಬಗ್ಗೆ ಮೋದಿ ಅವರ ನಿಲುವು ಎಂಥದ್ದು ಎಂಬುದನ್ನು ವೀಡಿಯೋ ಸಹಿತ ಜನತೆಗೆ ಮನದಟ್ಟು ಮಾಡಿದ್ದಾರೆ.
ಹಿಂದೂ ಸಮಾಜ ಸಂಕಷ್ಟಕ್ಕೆ ಒಳಗಾದಾಗೆಲ್ಲ ಅವಿರ್ಭವಿಸಿದ ಮಹಾ ಪುರುಷರಲ್ಲೊಬ್ಬರಾದ ಶ್ರೀ ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಮಾತನ್ನೊಮ್ಮೆ ಕಿವಿಯಾರೆ ಕೇಳಿಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರ್ ಅವರನ್ನು ಸಿ.ಟಿ.ರವಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ಭಾಷಣದ ತುಣುಕನ್ನು ಅವರು ವೈರಲ್ ಮಾಡಿದ್ದಾರೆ.
ಹಿಂದೂ ಸಮಾಜ ಸಂಕಷ್ಟಕ್ಕೆ ಒಳಗಾದಾಗೆಲ್ಲ ಅವಿರ್ಭವಿಸಿದ ಮಹಾ ಪುರುಷರಲ್ಲೊಬ್ಬರಾದ ಶ್ರೀ ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಶ್ರೀ @narendramodi ಯವರು ಹೇಳಿದ ಮಾತನ್ನೊಮ್ಮೆ ಕಿವಿಯಾರೆ ಕೇಳಿಸಿಕೊಳ್ಳಿ ಮಾಜಿ ಮುಖ್ಯಮಂತ್ರಿಗಳಾದ @siddaramaiah ಮತ್ತು @hd_kumaraswamy ಅವರೇ. pic.twitter.com/5dqnTH6DPW
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) January 17, 2022
ಸಿ.ಟಿ.ರವಿ ಅವರು ಟ್ವೀಟ್ ಮೂಲಕವೇ ಎದುರಾಳಿ ಪಕ್ಷದ ನಾಯಕರತ್ತ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಆರೆಸ್ಸೆಸ್‌ನ ಮುಂಜಾನೆಯ ಪ್ರಾರ್ಥನೆಯಲ್ಲಿ ನಡೆಸುವ ಏಕಾತ್ಮತಾ ಸ್ತೋತ್ರ ಹೇಗಿರುತ್ತದೆ ಎಂಬುದನ್ನು ಮನವರಿಕೆ ಮಾಡಿರುವ ಅವರು, ಅದರಲ್ಲಿ ನಮ್ಮಭಾರತ ಭೂಮಿಯ ಮಹಾ ಪುರುಷರನ್ನು ಸ್ಮರಿಸಿ ಪ್ರಾರ್ಥಿಸುವ ಪುಸ್ತಿಕೆಯ ಕೆಳ ಸಾಲುಗಳನ್ನೊಮ್ಮೆ ನೋಡಿ ಎಂದು ಸ್ತೋತ್ರದ ಪುಟದ ಫೊಟೋವನ್ನು ಟ್ಯಾಗ್ ಮಾಡಿ, ಮಾಜಿ ಸಿಎಂಗಳಿಗೆ ಟಾಂಗ್ ಕೊಟ್ಟಿದ್ದಾರೆ. ನಮಗೆ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು ನಿತ್ಯ ಸ್ಮರಣೀಯರು, ಅವರ ಆದರ್ಶ ನಮಗೆ ದಾರಿದೀಪ ಎಂದಿರುವ ರವಿ, ಏಕಾತ್ಮತಾ ಸ್ತೋತ್ರವನ್ನು ಒಮ್ಮೆ ಓದಿ ಕೃತಾರ್ಥರಾಗಿ. ಆ ಮೂಲಕವಾದರೂ ಮಹಾ ಪುರುಷರನ್ನು ಸ್ಮರಿಸಿಕೊಳ್ಳಿ. ನಿಮ್ಮ ಕಾಂಗ್ರೆಸ್ ಪಕ್ಷದ ರೀತಿ ನಾವು ಮಹಾ ಪುರುಷರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಎದಿರೇಟು ನೀಡಿದ್ದಾರೆ.
ನಮಗೆ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು ನಿತ್ಯ ಸ್ಮರಣೀಯರು, ಅವರ ಆದರ್ಶ ನಮಗೆ ದಾರಿದೀಪ @siddaramaiah ಅವರೇ.
ಏಕಾತ್ಮತಾ ಸ್ತೋತ್ರ ಒಮ್ಮೆ ಓದಿ ಕೃತಾರ್ಥರಾಗಿ ಆ ಮೂಲಕವಾದರೂ ಮಹಾ ಪುರುಷರನ್ನು ಸ್ಮರಿಸಿಕೊಳ್ಳಿ.
ನಿಮ್ಮ ಕಾಂಗ್ರೆಸ್ ಪಕ್ಷದ ರೀತಿ ನಾವು ಮಹಾ ಪುರುಷರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. pic.twitter.com/W2xRlZTDfn
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) January 17, 2022
ಗಣರಾಜ್ಯೋತ್ಸವದ ಸ್ತಬ್ದ ಚಿತ್ರಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ಸಂವಿಧಾನಿಕ ಹುದ್ದೆ ಅಲಂಕರಿಸಿ ಮಾಜಿಯಾದ ತಮಗಿಲ್ಲದಿರುವುದು ಖೇದಕರ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಿ.ಟಿ.ರವಿ, ಕೇರಳ ಸರಕಾರ ಮಾಡಿದ ಎಡವಟ್ಟು ಏನೆಂದು ತಮಗೆ ತಿಳಿದಿಲ್ಲ ಎಂದಾದರೆ ತಮ್ಮ ಮಿತ್ರರಾದ ಸಿಎಂ ಪಿನರಾಯಿ ವಿಜಯನ್ ಅವರಿಂದ ಮಾಹಿತಿ ತರಿಸಿಕೊಂಡು ತಿಳಿದುಕೊಳ್ಳಿ ಎಂದಿದ್ದಾರೆ.
ಅದೇ, ತಳ ಹಂತಕ್ಕೆ ಸೇರಿದ ನಮ್ಮ ಪ್ರಧಾನಿಗಳಿಗೆ ನಿಮ್ಮಿಂದ ಪ್ರಶಂಸಾ ಪತ್ರ ಬೇಕಾಗಿಲ್ಲ. ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ರಕ್ಷಣೆ ನೀಡಲಾಗದ ನಿಮ್ಮ ಸನ್ಮಿತ್ರ ಕಮ್ಯುನಿಸ್ಟ್ ಪಕ್ಷದ ಹಿಡನ್ ಅಜೆಂಡಾ ಏನು? ಸ್ತಬ್ಧ ಚಿತ್ರದ ಹೊಸ ವಿವಾದದ ಹಿಂದಿನ ಮಸಲತ್ತು ಏನು? ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ ರವಿ, ಈ ವಿಚಾರವನ್ನು ಮುಂದಿಟ್ಟು ಕೈ ನಾಯಕರನ್ನು ‘ಟೂಲ್ ಕಿಟ್ ಕಾಂಗ್ರೆಸ್ಸಿಗರೇ’ ಎಂದು ಕರೆದಿದ್ದಾರೆ.
ಅಲ್ಲೊಬ್ಬಾಕೆ ನೇತಾಜಿಯವರ ಬಗ್ಗೆ ಹೊಸ ವಿವಾದಕ್ಕೆ ನಾಂದಿ ಹಾಡಲು ಹೊರಟಿದ್ದಾರೆ. ನೀವಿಲ್ಲಿ ನಿಮ್ಮ ಕಮ್ಯುನಿಸ್ಟ್ ಮಿತ್ರರು ಮಾಡಿದ ಎಡವಟ್ಟನ್ನು ರಾಜಕೀಯ ಟೂಲ್ ಕಿಟ್ ಆಗಿ ಪರಿವರ್ತಿಸುವ ಪ್ರಯತ್ನದಲ್ಲಿದ್ದೀರಿ ಎಂದು ಕಾಂಗ್ರೆಸ್ ನಾಯಕರ ನಡೆ ಬಗ್ಗೆ ತಮ್ಮದೇ ದಾಟಿಯಲ್ಲಿ ವ್ಯಾಖ್ಯಾನ ಮಾಡಿರುವ ಸಿ.ಟಿ.ರವಿ, ಕಾಂಗ್ರೆಸ್ ಈ ಟೂಲ್ ಕಿಟ್ ಪ್ರಹಸನದಿಂದ ಹಿಂದೊಮ್ಮೆ ಮುಖಭಂಗಕ್ಕೆ ಒಳಗಾದದ್ದು ಮರೆತು ಹೋಯಿತೇ? ಎಂದು ಪ್ರಶ್ನಿಸಿದ್ದಾರೆ.
ಟೂಲ್ ಕಿಟ್ ಕಾಂಗ್ರೆಸ್ಸಿಗರೇ,
ಅಲ್ಲೊಬ್ಬಾಕೆ ನೇತಾಜಿಯವರ ಬಗ್ಗೆ ಹೊಸ ವಿವಾದಕ್ಕೆ ನಾಂದಿ ಹಾಡಲು ಹೊರಟಿದ್ದಾರೆ.
ನೀವಿಲ್ಲಿ ನಿಮ್ಮ ಕಮ್ಯುನಿಸ್ಟ್ ಮಿತ್ರರು ಮಾಡಿದ ಎಡವಟ್ಟನ್ನು ರಾಜಕೀಯ ಟೂಲ್ ಕಿಟ್ ಆಗಿ ಪರಿವರ್ತಿಸುವ ಪ್ರಯತ್ನದಲ್ಲಿದ್ದೀರಿ.
ಕಾಂಗ್ರೆಸ್ ಈ ಟೂಲ್ ಕಿಟ್ ಪ್ರಹಸನದಿಂದ ಹಿಂದೊಮ್ಮೆ ಮುಖಭಂಗಕ್ಕೆ ಒಳಗಾದದ್ದು ಮರೆತು ಹೋಯಿತೇ ?
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) January 17, 2022