ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಯಸ್ಸಿಗಾಗಿ, ಅವರ ಆಯುಷ್ಯ ಗಟ್ಟಿತನಕ್ಕಾಗಿ ತುಳುನಾಡಿನ ಜನರು ದೇವರ ಮೊರೆಹೋಗಿದ್ದಾರೆ. ಈ ಸಂಬಂಧ ದಕ್ಷಿಣ ಭಾರತದ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮೃತ್ಯುಂಜಯ ಯಾಗ ನಡೆದಿದೆ. ಪ್ರಧಾನಿಯ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗ ನೆರವೇರಿಸಿದ ಅಭಿಮಾನಿಗಳು, ದೇಶವನ್ನು ಆವರಿಸಿರುವ ಆತಂಕ ದೂರವಾಗುಂತೆಯೂ ಪ್ರಾರ್ಥಿಸಿದರು.
https://twitter.com/alvinviews/status/1482966757023563780?t=03wo7uKnZ2eG35P89jngbQ&s=08
ಚರ್ತುವೇದ ಪಾರಯಾಣ, ಗೋಪೂಜೆ, ಮಹಾಗಣಪತಿ ಹೋಮದ ಬಳಿಕ ಮೃತ್ಯುಂಜಯ ಹೋಮ ನೆರವೇರಿಸಲಾಯಿತು. ಕೆ.ಸಿ ನಾಗೇಂದ್ರ ಭಾರದ್ವಾಜ್ ಮಾರ್ಗದರ್ಶನದಲ್ಲಿ ಯಾಗದಿ ಕಾರ್ಯ ನೆರವೇರಿದ್ದು, ಈ ಕೈಂಕರ್ಯ ದೇಶದ ಗಮನಕೇಂದ್ರೀಕರಿಸಿತು.
https://twitter.com/alvinviews/status/1482968171590340608?t=HF77PCqOU4x3IrABfOOa-g&s=08