ಚಾಮರಾಜನಗರ: ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ನಾಗರೀಕರ ಜೊತೆಗೆ ಇಂದಿನ ಮಕ್ಕಳ ನಾಳಿನ ಪ್ರಜೆಗಳು ಎಂದು ಹೇಳುವ ಕಾರಣ ಮಕ್ಕಳು ಜಾಗೃತಕರಾಗಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಅಪರಾಧ ಚಟುವಟಿಕೆಗಳು ಕಂಡುಬಂಡಲ್ಲಿ ತಕ್ಷಣ ತಿಳಿಸಿ ಎಂದು ಹನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಮೂರ್ತಿ ಕರೆ ನೀಡಿದ್ದಾರೆ.
ಹನೂರು ಪೊಲೀಸ್ ಠಾಣೆಯಲ್ಲಿ ಗೌತಮ್ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಗಮನಸೆಳೆದರು. ಪೊಲೀಸರೆಂದರೆ ಭಯ ಬೇಡ ಸಾರ್ವಜನಿಕರ ಸಹಕಾರದಿಂದ ಕಾನೂನು ರಕ್ಷಣೆ ಮಾಡಲು ಸಾಧ್ಯ, ಮಕ್ಕಳು ಅನವಶ್ಯಕವಾಗಿ ಪೊಲೀಸರ ಮೇಲೆ ತಪ್ಪು ಕಲ್ಪನೆ ಬೆಳೆಸಿಕೊಳ್ಳಬೇಡಿ ಎಂದರು.
ಮಕ್ಕಳಲ್ಲಿ ಪೊಲೀಸರೆಂದರೆ ಸಾಮಾನ್ಯವಾಗಿ ಭಯವಿರುತ್ತದೆ ಇಂಥ ಭಯ ಹೋಗಲಾಡಿಸಿ ಮಕ್ಕಳ ಹಕ್ಕುಗಳಿಗೆ ತೊಂದರೆ ಬಂದಾಗ ಅಥವಾ ಮಕ್ಕಳಿಗೆ ರಕ್ಷಣೆ ಅವಶ್ಯಕತೆ ಇದ್ದಾಗ ಪೊಲೀಸರ ಸಹಾಯ ಪಡೆದುಕೊಳ್ಳಲು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ಮಿಸಲು ಇಲಾಖೆ ಸದಾ ಸಿದ್ಧವಾಗಿರುತ್ತದೆ ಹಾಗೂ ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಪೋಲಿಸ್ ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಿಳಿಸಿದರು
ಮಕ್ಕಳಲ್ಲಿ ಕಾನೂನು ಜಾಗೃತಿ: ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಸಂಚಾರ ನಿಯಮ ಪಾಲನೆಯಲ್ಲಿ ಉಲ್ಲಂಘನೆಯಾದಾಗ ಎದುರಿಸಬೇಕಾದ ದಂಡ ,ಶಿಕ್ಷೆ, ಸೈಬರ್ ಕ್ರೈಂ ಇನ್ನಿತರ ವಿಚಾರಗಳ ಬಗ್ಗೆ ಪೊಲೀಸರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಮೂರ್ತಿ, ಚೈತ್ರ, ಆನಂದನಾಯ್ಕ್ ಮೊದಲಾದವರು ಭಾಗವಹಿಸಿದ್ದರು.



















































