ಬೆಂಗಳೂರು, ಆ.20: ಅಲಯನ್ಸ್ ವಿಶ್ವವಿದ್ಯಾಲಯವು ಅಲಯನ್ಸ್ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶೇಷ ಇಮರ್ಷನ್ ಪ್ರೋಗ್ರಾಂ ಆಯೋಜಿಸಿತು. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಕೋನ ಬಲಪಡಿಸಿ, ಭವಿಷ್ಯದ ವೃತ್ತಿ ಮಾರ್ಗಗಳಿಗೆ ಸಜ್ಜುಗೊಳಿಸುವುದೇ ಇದರ ಉದ್ದೇಶ.
ಕಾರ್ಯಕ್ರಮವನ್ನು ಪ್ರೊ–ಚಾನ್ಸಲರ್ ಅಭಯ್ ಜಿ. ಚೆಬ್ಬಿ, ಕುಲಪತಿ ಡಾ. ಬಿ. ಪ್ರಿಸ್ಟ್ಲಿ ಶಾನ್, ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ ಹಾಗೂ ಪಿಯು ಕಾಲೇಜು ಪ್ರಾಚಾರ್ಯ ಡಾ. ಬಿ.ಹೆಚ್.ಎಸ್. ತಿಮ್ಮಪ್ಪ ಉದ್ಘಾಟಿಸಿದರು.
ಸುರೇಖಾ ಶೆಟ್ಟಿ ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಮನೋಭಾವ ಬೆಳೆಸಿ, ಶ್ರೇಷ್ಠತೆ ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಪ್ರೊ–ಚಾನ್ಸಲರ್ ಅಭಯ್ ಜಿ. ಚೆಬ್ಬಿ ಯಶಸ್ಸಿನ Attitude, Aptitude ಹಾಗೂ Solitude ಎಂಬ ಮೌಲ್ಯಗಳನ್ನು ನೆನಪಿಸಿ, ಆರೋಗ್ಯವೇ ಬೆಳವಣಿಗೆಯ ಅಡಿಪಾಯ ಎಂದರು.
ಕುಲಪತಿ ಡಾ. ಶಾನ್ ಅವರು ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಂಡು ಕೌಶಲ್ಯ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದರು. ಪ್ರಾಚಾರ್ಯ ತಿಮ್ಮಪ್ಪ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿದ್ಯಾರ್ಥಿ ಪ್ರತಿನಿಧಿ ದೀಪ್ತಿ ಕೆ.ಎನ್. ಧನ್ಯವಾದ ಸಲ್ಲಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಮಗ್ರಾಭಿವೃದ್ಧಿಗೆ ನೆರವಾಗುತ್ತವೆ ಎಂದು ವಿಶ್ವವಿದ್ಯಾಲಯವು ತಿಳಿಸಿದೆ