ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಅವರು ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ್ದರು. ಇದು ಸೌಹಾರ್ದ ಭೇಟಿಯಾಗಿತ್ತು ಎನ್ನಲಾಗಿದೆ.
ಈ ಭೇಟಿಯ ವೇಳೆ, ಸ್ಪೀಕರ್ ಅವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಧಾನಸಭಾ ಸಚಿವಾಲಯ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತಂತೆ ವಿವರಿಸಿದರು.
ತಮ್ಮ ಈ ಕಾರ್ಯಕ್ರಮಗಳಲ್ಲಿ, ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ಚರ್ಚೆ, ಭಾರತದ ಸಂವಿಧಾನ ಕುರಿತ ಚರ್ಚೆ, ಸಂಸದೀಯ ನಡೆವಳಿಕೆಯಲ್ಲಿ ಮೌಲ್ಯಗಳು ಮತ್ತು ತತ್ವ, ಸಿದ್ಧಾಂತಗಳು ಕುಸಿಯುತ್ತಿರುವ ಕುರಿತ ಚರ್ಚೆ ಸೇರಿವೆ,” ಎಂದು ಸ್ಪೀಕರ್ ಮಾನ್ಯ ರಾಜ್ಯಪಾಲರಿಗೆ ತಿಳಿಯಪಡಿಸಿದರು.
ಸ್ಪೀಕರ್ ಅವರ ಸದಾಚಾರ ಮತ್ತು ಕಾರ್ಯ ವಿಧಾನದಲ್ಲಿನ ಸಕ್ರಿಯ ಮತ್ತು ದೂರದರ್ಶಿತ್ವಕ್ಕೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸ್ಪೀಕರ್ ಕಚೇರಿ ಮೂಲಗಳು ತಿಳಿಸಿವೆ.