ಬೆಂಗಳೂರು: ಲಾಕ್‌ಡೌನ್ ಸಙದರ್ಭದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಪ್ ಅಥವಾ ಇನ್ನಿತರೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚುವ ಮುನ್ನ ಎಚ್ಚರದಿಂದಿರಿ. ಯಾಕೆಂದರೆ ನಿಮ್ಮ ಸಂದೇಶಗಳ ಬಗ್ಗೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ.
ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸಂದೇಶವೊಂದನ್ನು ಬೇಧಿಸಿ, ಅದನ್ನು ಪೋಸ್ಟ್ ಮಾಡಿದವರ ವಿರುದ್ದ ಕಾನೂನು ಪ್ರಹಾರಕ್ಕೆ ಪ್ರಕ್ರಿಯೆ ಆರಂಭಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಓರ್ವ ವ್ಯಕ್ತಿಯನ್ನು ಸುತ್ತುವರೆದು ಪೊಲೀಸರು ಹೊಡೆಯುತ್ತಿರುವ ವಿಡಿಯೋವನ್ನು ಮಹಿಳೆಯೊಬ್ಬರು ಶೇರ್ ಮಾಡಿದ್ದು, ಕರ್ನಾಟಕ ಲಾಕ್ಡೌನ್ ಸಮಯದಲ್ಲಿ ನಡೆದಿರುವ ಘಟನೆ ಎಂದು ಬಿಂಬಿಸಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.ಇದು ಕಳೆದ ವರ್ಷ ಏಪ್ರಿಲ್ 3 ರಂದು ಮುಂಬೈನಲ್ಲಿ ನಡೆದ ಘಟನೆಯಾಗಿದೆ ಎಂದಿರುವ ಆಯುಕ್ತರು, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ಪರಿಶೀಲಿಸಿ ಶೇರ್ ಮಾಡಿ!!
ಒಬ್ಬ ವ್ಯಕ್ತಿಯನ್ನು ಸುತ್ತುವರಿದು ಪೊಲೀಸ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಮಹಿಳೆ ಅದನ್ನು ಕರ್ನಾಟಕ ಲಾಕ್ಡೌನ್ ಸಮಯದಲ್ಲಿ ನಡೆದಿದ್ದು ಎಂದು ವಿವರಿಸುತ್ತಾ ಇರುವುದು ವಿಡಿಯೋದಲ್ಲಿ ಗಮನಿಸಬಹುದು. https://t.co/ZNkRZUNGWM (1/2) pic.twitter.com/pTTxlLslTJ
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) May 11, 2021
ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು.ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ಮಾಡಿದ್ದಾರೆ.
ಈ ಮೂಲಕ ತಿಳಿಸುವುದೇನೆಂದರೆ, ಆ ದೃಶ್ಯದಲ್ಲಿರುವುದು ಕರ್ನಾಟಕ ಪೊಲೀಸ್ ಅಲ್ಲ, ಆ ಘಟನೆ ಏಪ್ರಿಲ್ 3,2020 ಮುಂಬೈಯಲ್ಲಿ ನಡೆದಿದೆ. ಈ ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು.ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು.(2/2)
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) May 11, 2021