ಶಿರಸಿ: ನಗರದ ಕೆ ಎಚ್ ಬಿ ಕಾಲೋಲಿಯ ಹೊಸ ಬಡಾವಣೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೀಪದಲ್ಲಿ ಮೂವರನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ಅಯ್ಯಪ್ಪ ನಗರದ ಮಂಜುನಾಥ ಗೋಪಾಲ ಪಾಠಣಕರ್, ಮಾರ್ಕೆಟ್ ರಸ್ತೆಯ ಹರೀಶ್ ಮಂಜುನಾಥ ನಾಯ್ಕ, ರಾಜೀವನಗರದ ವಿರೇಶ ಶನಿಯಾ ಶಿರ್ಸಿಕರ್ ಇವರೆ ಆರೋಪಿಗಳಾಗಿದ್ದು ಇವರಿಂದ 228ಗ್ರಾಂ ಗಾಂಜಾ 1250ರೂ ನಗದು ಸೇರಿ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಶಿರಸಿ ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ , ಮಾರುಕಟ್ಟೆ ಠಾಣೆ ಪಿಎಸ್‌ಐ ಭಿಮಾಶಂಕರ್, ಕ್ರೈಂ ಪಿಎಸ್ಐ ಜಯಶ್ರೀ ಸಿಬ್ಬಂದಿಗಳಾದ ಮೊಹಮ್ಮದ್ ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಹನುಮಂತ ಬಂಕಾಪುರ, ಮೋಹನನಾಯ್ಕ, ಪಾಂಡುರಂಗ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.