(ಭಕ್ತಿ ನುಡಿ: ಅನಂತ ಪದ್ಮನಾಭ ಆಸ್ರಣ್ಣ, ಶ್ರೀ ಕ್ಷೇತ್ರ ಕಟೀಲು)
ಸರ್ವ ಮಂಗಲ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ ।
ಶಲಣ್ಯೇ ತ್ರ್ಯಂಬಕೇ ಗೌರೀ
ನಾರಾಯಣೀ ನಮೋಸ್ತುತೇ॥
ಸ್ತುತಾ ಸಂಪೂಜಿತಾ ಪುಷ್ಪೈಃ
ಗಂಧ ಧೂಪಾದಿಭಿಸ್ತದಾ ।
ದದಾತಿ ವಿತ್ತಂ ಪುತ್ರಾಂಶ್ಚ
ಮತಿಂ ಧರ್ಮೇ ಗತಿಂ ಶುಭಾಂ
ಸರ್ವಮಂಗಲೆಮಾಂಗಲ್ಯೇ ಶಿವೆಯು ಶರಣರ ಪೊರೆವವಳು. ವಿದ್ಯಾ ಬುಧ್ಧಿ ಪ್ರದಾಯಕಳಾದ ಗೌರಿಯು ಸರ್ವಾರ್ಥ ಸಿಧ್ಧಿದಾಯಕಳಾಗಿ ಕಾಯುವ ರಕ್ಷಿಪ ತ್ಯಂಬಕೆಯಾದ ನಾರಾಯಣಿಯು
ನಿರಂತರ ಸ್ತುತಿ ಮಾಡುವುದರಿಂದ ಪುಷ್ಪ ಅರ್ಚನೆ, ಗಂಧ ಧೂಪಾದಿ ಆರಾಧನೆಯಿಂದ ಚೆನ್ನಾಗಿ ಪೂಜಿಸಿದಾಗ ಭಕುತ ಜನರಿಗೆ ನ್ಯಾಯಾರ್ಜಿತವಾದ ಸಂಪಾದನೆಯನ್ನು ಸಂತಾನವೃಧ್ಧಿಯನ್ನು ಮಕ್ಕಳಿಗೆ ಶ್ರೇಯೋಭಿವೃಧ್ಧಿಯನ್ನು ಧರ್ಮ ಕಾರ್ಯದಲಿ ನಿರಂತರ ಪ್ರವೃತ್ತಿಯನ್ನು ಉತ್ತಮ ಗುಣ ಭಧ್ಧಿಯನ್ಪು ಜೀವಿತ ಕಾಲದಿ ಮನೋಭೀಷ್ಟ ಸಿಧ್ಧಿಯನ್ನು ದಯಪಾಲಿಸಿ ಜೀವನಾಂತ್ಯದಿ ಮೋಕ್ಷವನ್ನು ಅನುಗ್ರಹಿಸುವಳು.
ಕಟೀಲಮ್ಮ ಭಕುತ ಜನರ ಕಾಮಧೇನುವಾಗಿ ಸಂರಕ್ಷಿಸು ಜಗನ್ಮಾತೆಯಾಗಿ ನೆಲೆನಿಂತ ತಾಯಿಯ ಬ್ರಹ್ಮ ಕಲಶೋತ್ಸವ ಶಭ ದಿನವದ ಈ ಶುಭದಿನದಲಿ ತಾಯಿಯಲಿ ಬೇಡುವ ಶುಭಾಯಶಯಗಳೊಂದಿಗೆ.