ಬೆಳ್ಳಂಬೆಳಗ್ಗೆಯೇ ಭೀಕರ ದುರಂತದ ಸುದ್ದಿ ಕೇಳಿ ಇಡೀ ಕರುನಾಡು ಬೆಚ್ಸಿ ಬಿದ್ದಿದೆ. ಶಿವಮೊಗ್ಗ ಜಿಲೀಯಾದ್ಯಂತ ಬುಧವಾರ ರಾತ್ರಿ ಭಾರೀ ಸ್ಫೋಟದೊಂದಿಗೆ ಭೂಕಂಪನದ ಅನುಭವವಾಗಿತ್ತು. ಭೂಕಂಪ ಸಂಭವಿಸಿದೆ ಎಂದೇ ಜನ ಭಯಭೀತರಾಗಿದ್ದರು. ಆದರೆ ಆ ಹೊತ್ತಿಗೆ ಶಿವಮೊಗ್ಗ ಸಮೀಪದ ಅಬ್ಬಲಗೆರೆ- ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸ್ಫೋಟಕ ಸಿಡಿದು ಭಾರೀ ಅನಾಹುತ ಸಂಭವಿಸಿದೆ. ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೆಟ್ ಸ್ಪೋಟಿಸಿದ ಪರಿಣಾಮ ಬಿಹಾರ ಮೂಲದ 8 ಕಾರ್ಮಿಕರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೆಟ್ ಬಾಕ್ಸ್ ಗಳನ್ನು ಒಂದೆಡೆ ಇಡಲಾಗಿತ್ತು. ಈ ಫೋಟಕಗಳು ಸಿಡಿದು 8 ಮಂದಿ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಭೂಮಿ ಕಂಪಿಸಿದ ಅನುಭವವಾದ ಸಮಯದಲ್ಲೇ ಈ ಘಟನೆ ನಡೆದಿದೆ. ಈ ಸ್ಪೋಟದಿಂದಲೇ ಭೂಕಂಪನದ ಅನುಭವವಾಗಿರಬಹುದೆಂದು ಹೇಳಲಾಗುತ್ತಿದೆ.