ಮಂಗಳೂರು: ಮಹಾಪ್ರಸ್ಥಾನಗೈದ ವೃಂದಾವನಸ್ಥರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ ಪುಣ್ಯತಿಥಿ ಆರಾಧನೆಯು ಈ ಬಾರಿ ಮಂಗಳೂರಿನ ಶ್ರೀ ವೆಂಕಟರಮಣ ದೇವಳದಲ್ಲಿ ನೆರವೇರಿತು. ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಕೈಂಕರ್ಯ ಗಮನಸೆಳೆಯಿತು.
ರಾತ್ರಿ ಶ್ರೀ ದೇವಳದಲ್ಲಿ ವಿಶೇಷ ಸ್ವರ್ಣ ಗರುಡೋತ್ಸವ, ಸಂಸ್ಥಾನದಲ್ಲಿ ಪ್ರಧಾನ ಶ್ರೀ ವೇದವ್ಯಾಸ ದೇವರಿಗೆ ಕನಕಾಭಿಷೇಕ, ಗಂಗಾಭಿಷೇಕ, ಲಘು ವಿಷ್ಣು ಅಭಿಷೇಕಗಳು ನಡೆಯಿತು. ರಾತ್ರಿ ಸಂಸ್ಥಾನದ ಶ್ರೀ ವೇದವ್ಯಾಸ ದೇವರಿಗೆ ಸ್ವರ್ಣ ಗರುಡ ವಾಹನ ಸೇವೆ ಶ್ರೀಗಳವರ ಮಾರ್ಗದರ್ಶನದಲ್ಲಿ ನೆರವೇರಿದ್ದು ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಸುಂದರ ಸನ್ನಿವೇಶಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ.ಎಲ್.ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು .