ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಟಿ20 ವಿಶ್ವಕಪ್ ನಡೆಯಲಿದ್ದು, ಅನಂತರ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಆಡಲಿದೆ. ಈ ಟಿ20 ಸರಣಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ.
ಜುಲೈ 6: ಮೊದಲ ಪಂದ್ಯ, ಜುಲೈ 7: ಎರಡನೇ ಪಂದ್ಯ, ಜುಲೈ 10: ಮೂರನೇ ಪಂದ್ಯ, ಜುಲೈ 13: ನಾಲ್ಕನೇ ಪಂದ್ಯ, ಜುಲೈ 14: ಐದನೇ ಪಂದ್ಯ ನಡೆಯಲಿದೆ ಎಂದು BCCI ತಿಳಿಸಿದೆ.






















































