ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಆರೋಪಿಸಿದೆ. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿನ ವಿಳಂಬ, ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಿರಾಸಕ್ತಿ ಸಹಿತ ಸರ್ಕಾರದ ವೈಫಲ್ಯಗಳನ್ನು ಉಲ್ಲೇಖಿಸಿ ಕಾಂಗ್ರಸ್ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಸೈಕಲ್ ಪಠ್ಯಪುಸ್ತಕ, ವಿದ್ಯಾರ್ಥಿವೇತನ, ಶಿಕ್ಷಕರ ನೇಮಕಾತಿ, ಶೂ, ಸಾಕ್ಸ್, ಅನುದಾನ ಈ ಎಲ್ಲಾ ವಿಷಯಗಳಿಗೂ ಶಿಕ್ಷಣ ಸಚಿವರದ್ದು ಒಂದೇ ಡೈಲಾಗ್ “ವಿಳಂಬವಾಗಿದೆ, ಸರಿಪಡಿಸುತ್ತೇವೆ”. 40% ಕಮಿಷನ್ ಚೌಕಾಶಿಗಾಗಿ ಈ ವಿಳಂಬವೇ? ಎಂದು ಅನುಮಾನ ವ್ಯಕ್ತಡಿಸಿರುವ ಕಾಂಗ್ರೆಸ್ ಪಕ್ಷ ಮಕ್ಕಳ ಶಿಕ್ಷಣಕ್ಕೆ ಕರೊನಾಕ್ಕಿಂತ ಬಿಜೆಪಿ ಸರ್ಕಾರವೇ ಹೆಚ್ಚು ಮಾರಕವಾಗಿ ಪರಿಣಮಿಸಿದೆ ಎಂದು ಆರೋಪಿಸಿದೆ.
•ಸೈಕಲ್
•ಪಠ್ಯಪುಸ್ತಕ
•ವಿದ್ಯಾರ್ಥಿವೇತನ
•ಶಿಕ್ಷಕರ ನೇಮಕಾತಿ
•ಶೂ, ಸಾಕ್ಸ್
•ಅನುದಾನಈ ಎಲ್ಲಾ ವಿಷಯಗಳಿಗೂ ಶಿಕ್ಷಣ ಸಚಿವರದ್ದು ಒಂದೇ ಡೈಲಾಗ್
“ವಿಳಂಬವಾಗಿದೆ,ಸರಿಪಡಿಸುತ್ತೇವೆ”!40% ಕಮಿಷನ್ ಚೌಕಾಶಿಗಾಗಿ ಈ ವಿಳಂಬವೇ?
ಮಕ್ಕಳ ಶಿಕ್ಷಣಕ್ಕೆ ಕರೊನಾಕ್ಕಿಂತ ಬಿಜೆಪಿ ಸರ್ಕಾರವೇ ಹೆಚ್ಚು ಮಾರಕವಾಗಿ ಪರಿಣಮಿಸಿದೆ.#MakkaligeMosa pic.twitter.com/H2fT4hHJeH
— Karnataka Congress (@INCKarnataka) July 14, 2022



























































