ಬೆಂಗಳೂರು: ಮರಗಳಿಗೂ ಜೀವವಿದೆ ಎಂಬುದನ್ನ ಮರೆತು ಜಾಹಿರಾತು ಬಿತ್ತಿಪತ್ರಗಳನ್ನು ಮೊಳೆಗಳು ಹಾಗೂ ಪಿನ್ ಗಳನ್ನು ಬಳಸಿ ವೃಕ್ಷಗಳಿಗೂ ಹಾನಿಯುಂಟುಮಾಡುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ.
ಬೆಂಗಳೂರಿನ ವಿಜಯನಗರದ ಬಿ.ಪ್ಯಾಕ್ ಸಿವಿಕ್ ಲೀಡರ್ಸ್ ಈ ರೀತಿಯ ಕೃತ್ಯಗಳ ವಿರುದ್ದ ಅಖಾಡಕ್ಕಿಳಿದಿದ್ದಾರೆ. ಮರಗಳಲ್ಲಿನ ಭಿತ್ತಿ ಪತ್ರಗಳನ್ನು ತೆಗೆದು, ಎಷ್ಟು ಮೊಳೆಗಳು ಹಾಗೂ ಪಿನ್ ಗಳನ್ನು ಹೊಡೆಯಲಾಗಿತ್ತು ಎಂಬ ಬಗ್ಗೆ ಈ ಲೀಡರ್ಸ್ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಮರವೊಂದರಲ್ಲಿ 300ಕ್ಕೂ ಹೆಚ್ಚು ಮೊಳೆಗಳು ಪತ್ತೆಯಾಗಿವೆ. ಈ ಕುರಿತು ಫಲಕವನ್ನು ಪ್ರದರ್ಶಿಸಿ ಜನರಿಗೆ ಅರಿವು ಮೂಡಿಸಿದರು.
ಜಾಹಿರಾತು ಹಾಕಿದವರ ವಿರುದ್ದ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿ.ಪ್ಯಾಕ್ ಕಾರ್ಯಸಂಯೋಜಕ ರಾಘವೇಂದ್ರ ಪೂಜಾರಿ ಅವರು ತಿಳಿಸಿದ್ದಾರೆ.